ಕಲಬುಗರ್ಿಯ ನಿಗೂಢ ಬಿಸಿಲು ಮತ್ತು ಕಡ್ಲೆಕಾಯಿಗಿಡ ಪರಿಷೆ!
ಕಲಬುಗರ್ಿಗೆ ವರ್ಗವಾದ ವಿಷಯ ತಿಳಿಸಿ ಹೆಚ್ಚೇನೂ ಸಮಯ ಆಗಿರಲಿಲ್ಲ. ಇಲ್ಲಿನ ಬಿಸಿಲು ಕುರಿತು ಕೆಲ ಆಪ್ತರು ಹವಾಮಾನ ವರದಿ ಸಿದ್ಧಪಡಿಸಿ, ಮಾಹಿತಿ ನೀಡತೊಡಗಿದರು. ಅವರ ವರದಿ ಮತ್ತು ವರ್ಣನೆ ಸೂಕ್ಷ್ಮವಾಗಿ ಅರಿಯಲು ಪ್ರಯತ್ನಿಸಿದಷ್ಟು ಬಿಸಿಲು ಇನ್ನಷ್ಟು ನಿಗೂಢವಾಯಿತು. ಹಿರಿಯರೊಬ್ಬರು ತಡ ಮಾಡದೇ ಸ್ಪಷ್ಟವಾದ ಒಂದು ವಾಕ್ಯದ ವರದಿ ಪ್ರಕಟಿಸಿಬಿಟ್ಟರು: ಕಲಬುಗರ್ಿಯಲ್ಲಿ ಇರೋದು ಎರಡೇ ಕಾಲ. ಒಂದು ಹೆಚ್ಚು ಬಿಸಿಲುಗಾಲ, ಮತ್ತೊಂದು ಅತಿ ಹೆಚ್ಚು ಬಿಸಿಲುಗಾಲ.
ಬಿಸಿಲಿನ ಕುರಿತು ಸಮಗ್ರ ಅಧ್ಯಯನ ಮಾಡುವ ವೇಳೆಗೆ ಹಾರೈಕೆಗಳು ಬರತೊಡಗಿದವು. "ಬಿಸಿಲುನಾಡಿಗೆ ಹೊರಟಿದ್ದೀರಿ. ಶುಭವಾಗಲಿ" ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, "ಸುಡುವ ಬಿಸಿಲಿನಲ್ಲಿ ಬದುಕು ಕಷ್ಟ" ಎಂದು ಕಾಳಜಿ ತೋರಿದರು, "ಅಂತಹ ಬಿಸಿಲಲ್ಲಿ ಹೇಗೆ ಇರುತ್ತೀರಿ" ಎಂದು ಒಬ್ಬರು ಕಳಕಳಿ ವ್ಯಕ್ತಪಡಿಸಿದರೆ, "ಅಲ್ಲಿ ಬಿಸಿಲು, ಚಳಿ, ಮಳೆ ಎಲ್ಲವೂ ಒಂದೇ" ಎಂದು ಮತ್ತೊಬ್ಬರು ಸಮಾನತೆ ಮಾತನ್ನು ಬೋಧಿಸಿದರು. "ಇಲ್ಲಿನ ಬಿಸಿಲು ಅಂತಹ ಅಪಾಯಕಾರಿಯೇನಲ್ಲ" ಎಂದು ಇನ್ನೊಬ್ಬರು ಧೈರ್ಯ ತುಂಬಿದರು.
ಚಿಕ್ಕಬಳ್ಳಾಪುರ ತೊರೆದು ಕಲಬುಗರ್ಿ ಬರುವ ವೇಳೆಗೆ ಬಿಸಿಲಿನ ಹಲವು ಮುಖಗಳು ನನಗೆ ಗೊತ್ತಿಲ್ಲದಂತೆ ಪರಿಚಯವಾದವು. ಬಿಸಿಲಿನ ಪ್ರತಾಪದ ಕುರಿತು ಥಿಯರಿ ಸಾಕು, ಇನ್ನೇನಿದ್ದರೂ ಪ್ರಾಕ್ಟಿಕಲ್ ಆಗಿ ಅದರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಅನ್ನಿಸಿತು. ಅದಕ್ಕಾಗಿ ಮಾನಸಿಕ, ದೈಹಿಕವಾಗಿ ಸಿದ್ಧತೆ ಮಾಡಿಕೊಂಡೆ. ಅದೇ ಹಾದಿಯಲ್ಲಿ ಮುನ್ನಡೆದು ಈಗ 7ನೇ ತಿಂಗಳಿಗೆ ಕಾಲಿರಿಸಿದ್ದೇನೆ. ಬಿಸಿಲಿನ ಜೊತೆ ಒಡನಾಟ ಬೆಳೆಸಿಕೊಂಡಿದ್ದೇನೆ. ಅದರೊಂದಿಗೆ ಸ್ನೇಹ ವೃದ್ಧಿಸಿಕೊಳ್ಳುವ ಯತ್ನದಲ್ಲಿದ್ದೇನೆ.
ಬಿಸಿಲು ಈವರೆಗೆ ನನಗೆ ಸ್ನೇಹಮಯಿಯಾಗಿದ್ದು, ಕ್ರಮೇಣ ಆಪ್ತವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಆದರೆ ಇಲ್ಲಿನ ಜನರೊಂದಿಗೆ ಬಿಸಿಲು ಆಪ್ತವಾಗಿದೆಯಲ್ಲದೇ ಜೀವಾಳ ಕೂಡ ಆಗಿದೆ. ಅಂತಹ ಬೆಸುಗೆ ಇಲ್ಲಿನ ಜನರೊಂದಿಗೆ ಅದು ಬೆಸೆದುಕೊಂಡಿದೆ. ಸುಡುಸುಡುವ ಬಿಸಿಲು ಇದ್ದರೇನೆ ಇಲ್ಲಿನ ಜನರು ಕೊಂಚ ಚುರುಕು. ಮೋಡ ಮುಸುಕಿದ ವಾತಾವರಣ ಅಥವಾ ಚಳಿಯಿದ್ದರೆ, ಅದಕ್ಕೆ ತಕ್ಕಂತೆ ಇಲ್ಲಿನ
ಜನರು ಮನೆಯಲ್ಲೇ ಇರಲು ಬಯಸುತ್ತಾರೆ. ಬಿಸಿಲಿಗಾಗಿ ಚಡಪಡಿಸುತ್ತಾರೆ.
ಬಿಸಿಲಿಗಾಗಿ ಜನರು "ಪರೇಶಾನ" ಆಗುವುದು ಅಥವಾ ಅದರ ನಿರೀಕ್ಷೆಯಲ್ಲಿರುವುದು ಕಂಡಿದ್ದೇನೆ. "ಮೋಡ ಮುಸುಕಿದ ವಾತಾವರಣದಲ್ಲಿ ಯಾವುದೇ ಕೆಲಸ ಮಾಡಲಿಕ್ಕೂ ಮನಸ್ಸು ಬರಲ್ರಿ. ಮಳೆ, ಚಳಿಯಿದೆ ಅಂತ ಎಷ್ಟು ದಿನ ಮನೆಯಲ್ಲಿ ಕೂರಲು ಸಾಧ್ಯ" ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದ್ದರು.
"ಸರ್ರ, ಬಿಸಿಲು ಇರಬೇಕ್ರಿ. ನಮಗ ಚಳಿ ಆಗ ಬರಂಗಿಲ್ರಿ. ಮನಿ ಮತ್ತು ಆಫೀಸಿನದ್ದು ಎಸಿ, ಫ್ಯಾನು ಬಂದ್ ಮಾಡ್ಕೊಂಡು ಇರಬೋದ್ರಿ. ಆದರೆ ಬಿಸಿಲು ಇಲ್ಲದೇ ಇರೋದು ಹೆಂಗ್ರಿ" ಎಂದು ಮತ್ತೊಬ್ಬರು ಹೇಳಿದ್ದು ಕಿವಿಯಲ್ಲಿ ಇನ್ನೂ ಗುಂಯ್ಯಗುಟ್ಟುತ್ತಿದೆ.
ಇದೇನಿದು ಬಿಸಿಲು ಇಲ್ಲಿನ ಜನರ ಈ ಪರಿ ಜಾದೂ ಮಾಡಿದೆಯೆಂದು ಬೀದಿಯಲ್ಲಿ ಹುಡುಕಿ ಹೊರಟರೆ, ಅಜೀಬ್ ದೃಶ್ಯಗಳು ಎದುರಾದವು. ಸುಡುಸುಡುವ ಬಿಸಿಲಿದ್ದರೂ ಯಾರೊಬ್ಬರ ತಲೆ ಮೇಲೆ ಟೋಪಿ ಇರಲಿಲ್ಲ, ಕೈಯಲ್ಲಿ ಛತ್ರಿ ಇರಲಿಲ್ಲ. ಕೆಲ ಯುವತಿಯರು ಮತ್ತು ಮಹಿಳೆಯರು ಮುಖದ ಸುತ್ತಲೂ ತೆಳುವಾದ ಬಟ್ಟೆ ಹಾಕಿಕೊಂಡಿದ್ದು ಬಿಟ್ಟರೆ, ಅವರೂ ಸಹ ಛತ್ರಿ ಹಿಡಿದಿರಲಿಲ್ಲ. ಬೀದಿ ವ್ಯಾಪಾರಸ್ಥರು, ವೃದ್ಧರು ಮತ್ತು ಇತರರು ಬಿಸಿಲಿನಿಂದ ಕೊಂಚವೂ ಕೂಡ "ಹೈರಾಣ" ಆದಂತೆ ಕಾಣಲಿಲ್ಲ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ಬಳಿ ಹೋಗಿ ನಿಂತಾಗ, ನಾನು "ಹೈರಾಣ" ಆದೆ. ಕಾರಣ: ಟೀ ಪಾಯಿಂಟ್ಗಳಲ್ಲಿ ಜನರು 5 ರೂಪಾಯಿಯ ಚಹಾ ಜೊತೆಗೆ 15 ರಿಂದ 20 ರೂಪಾಯಿಯ ಕಾರವುಳ್ಳ ಮಿಚರ್ಿ ರುಚಿಕಟ್ಟಾದ ಬಜ್ಜಿ ಸವಿಯುತ್ತಿದ್ದರು. ಕಾರದ ಚಟ್ನಿ ಜೊತೆ ಮೆಣಸಿನಕಾಯಿ ಬಜ್ಜಿಯನ್ನು ಅವರು ಒಂದೊಂದಾಗಿ ಸವಿಯುತ್ತಿದ್ದರೆ, ನಾನು ನಿಂತಲ್ಲೇ ಬೆವರಿದೆ. ಆದರೆ, ಅದು ಬಿಸಿಲಿನಂದಲ್ಲ. ಅವರು ಕಾರದ ಮೆಣಸಿನಕಾಯಿ ಜೊತೆ ಬೆಳೆಸಿಕೊಂಡ ನಂಟನ್ನು ಕಂಡು!
ಇಷ್ಟೆಲ್ಲ ಕಂಡು, ಸುಮ್ಮನಿರುವುದಾದರೂ ಹೇಗೆ? ನೇರವಾಗಿ ಹೋಗಿ ಒಬ್ಬರನ್ನು ಕೇಳಿಯೇ ಬಿಟ್ಟೆ. ಸುಡುಸುಡುವ ಬಿಸಿಲಿನಲ್ಲಿ ನೀವು ಬಿಸಿ ಬಿಸಿ ಚಹಾ ಕುಡಿಯುವುದಾದರೂ ಹೇಗೆ? ಅವರು ನೀಡಿದ್ದು ಸರಳ ಉತ್ತರ: ಬಿಸಿಲಿನಲ್ಲಿ ಬಿಸಿ ಚಹಾ ದೇಹವನ್ನು ಇನ್ನಷ್ಟು ಬಿಸಿಯಾಗಿಸದೇ ನಿಯಂತ್ರಿಸುತ್ತದೆ. ಅತಿಯಾದ ಬಿಸಿಲಿನಲ್ಲಿ ಅತಿಯಾದ ತಣ್ಣನೆಯ ಪದಾರ್ಥ ಸೇವಿಸಿದರೆ ಅಥವಾ ಕುಡಿದರೆ, ಶೀತ ಅಥವಾ ಬೇರೆ ಸಮಸ್ಯೆ ಕಾಡುತ್ತದೆ. ಆದರೆ ಬಿಸಿ ಚಹಾ ಸೇವಿಸಿದರೆ, ಅಂತಹ ಸಮಸ್ಯೆಯಾಗುವುದಿಲ್ಲ.
ಈ ಪ್ರದೇಶದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿರಲು ಹಲವು ವೈಜ್ಞಾನಿಕ ಕಾರಣಗಳಿವೆ. ಅವುಗಳನ್ನು ಒಟ್ಟುಗೂಡಿಸಿ, ಬಿಸಿಲಿನ ಸಮಗ್ರ ಚಿತ್ರಣ ಪಡೆಯಬೇಕು. ಮಂಗಳೂರು ಮತ್ತು ಕಲಬುಗರ್ಿ ಬಿಸಿಲಿಗೂ ಹಲವು ರೀತಿಯ ವ್ಯತ್ಯಾಸವಿದ್ದರೆ, ಕಲಬುಗರ್ಿ ಮತ್ತು ಬೆಂಗಳೂರಿನ ಬಿಸಿಲಿಗೂ ಅಷ್ಟೇ ಪ್ರಮಾಣದ ಅಂತರವಿದೆ. ಬೇರೆ ಬೇರೆ ಜಿಲ್ಲೆಗಳ ಕೆಲ ಜನರು ಬಿಸಿಲಿನ ಜೊತೆ ಹೆಚ್ಚು ಸಾಂಗತ್ಯ ಬೆಳೆಸಿಕೊಳ್ಳಲು ಬಯಸುವುದಿಲ್ಲ. ಆದರೆ ಕಲಬುಗರ್ಿ ಜನರು ಬಿಸಿಲಿನಲ್ಲಿ "ಬೆಚ್ಚನೆಯ" ಅನುಭೂತಿ ಪಡೆಯುತ್ತಾರೆ.
ಬಿಸಿಲಿನ ಕುರಿತು ಇಷ್ಟೆಲ್ಲ ಬರೆಯಲು ಮತ್ತೊಂದು ಕಾರಣವಾಗಿದ್ದು, ಕಡ್ಲೆಕಾಯಿಗಿಡ (ಸುಲಗಾಯಿ) ಮತ್ತು ಅವುಗಳ ಮಾರಾಟಗಾರರು. ಬೇರೆಯಲ್ಲೂ ಸಹ ಸಿಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಡ್ಲೆಕಾಯಿ ಗಿಡ ಕಲಬುಗರ್ಿಗೆ ಬಂದಿವೆ. ಇಲ್ಲಿನ ಯಾವುದೇ ಪ್ರಮುಖ ಬೀದಿ, ಸ್ಥಳ ಅಥವಾ ವೃತ್ತಗಳಿಗೆ ಹೋದರೆ ಸಾಕು, ಅಲ್ಲಿ ನಿಶ್ಚಿತವಾಗಿ ಮಹಿಳೆಯೊಬ್ಬರು ಬಿಸಿಲಲ್ಲಿ ಕಡ್ಲೆಕಾಯಿಗಿಡ ಮಾರುತ್ತಿರುವುದು ಕಾಣಸಿಗುತ್ತಾರೆ. ಬಿಸಿಲು ಎಷ್ಟೇ ಏರಿಕೆಯಾದರೂ ಅಥವಾ ಸಂಜೆ ವೇಳೆ ಚಳಿ ಕೊಂಚ ಜಾಸ್ತಿಯಾದರೂ ವ್ಯಾಪಾರಸ್ಥರು ಒಂದೇ ಬದಿ ಕೂತು ಮಾರುತ್ತಾರೆ. ಬೆಳಿಗ್ಗೆ 10ಕ್ಕೆ ಬಂದವರು ರಾತ್ರಿ 8ರ ನಂತರವೇ ಅಲ್ಲಿಂದ ನಿರ್ಗಮಿಸುತ್ತಾರೆ.
ಹುಬ್ಬಳ್ಳಿಯಲ್ಲಿ ದುರ್ಗದಬೈಲಿಗೆ ಹೋದಾಗ ಅಥವಾ ಜನತಾ ಬಜಾರ್ ಬಳಿ ಸುತ್ತಾಡಿದಾಗ ಮಾತ್ರ ಅಲ್ಲಲ್ಲಿ ಕಡ್ಲೆಕಾಯಿ ಗಿಡ ಮಾರಾಟಗಾರರು ಸಿಗುತ್ತಿದ್ದರು. ಅವುಗಳನ್ನು ಖರೀದಿಸಿ, ಮನೆಯವರೆಗೆ ಕಡ್ಲೆಕಾಯಿ ತಿಂದುಕೊಂಡು ಹೋಗುವುದೇ ಒಂದು ಖುಷಿ. ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ವಾಸವಿದ್ದಾಗ, ಅದು ಸಿಕ್ಕಿದ್ದು ತುಂಬಾನೇ ಕಡಿಮೆ. ಆದರೆ ಕಲಬುಗರ್ಿಯಲ್ಲಿ ವಾರದಿಂದ ಕಣ್ಣು ಹಾಯಿಸಿದ ಕಡೆಯಲೆಲ್ಲ, ಕಡ್ಲೆಕಾಯಿಗಳದ್ದೇ ಭರಾಟೆ. ಒಂದರ್ಥದಲ್ಲಿ ಕಡ್ಲೆಕಾಯಿಗಳ ಪರಿಷೆ!
ಕೆಲ ಮಕ್ಕಳು ಕೊಂಚ ದೊಡ್ಡವರಾದ ಬಳಿಕ ರಸ್ತೆಯುದ್ದಕ್ಕೂ ಮನಸ್ಸಿಗೆ ಬಂದುದ್ದೆಲ್ಲ ತಿನ್ನುತ್ತ ಅಥವಾ ಐಸ್ಕ್ರೀಮ್ ಸವಿಯುತ್ತ ಹೋಗಲು ಇಚ್ಛಿಸುವುದಿಲ್ಲ. ಆದರೆ ಕಡ್ಲೆಕಾಯಿಗಿಡ ಹಿರಿಯರನ್ನೂ ಸಹ ಮಕ್ಕಳನ್ನಾಗಿಸುತ್ತದೆ. 10 ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದಷ್ಟು ಕಡ್ಲೆಕಾಯಿಗಿಡ ಖರೀದಿಸಿ, ನಡೆಯುತ್ತ ಸಾಗಿದರೆ, ಅಂತಹ ಮುಜುಗರ ಆಗುವುದಿಲ್ಲ. ಒಬ್ಬರು ಹಾಗೆ ನಡೆಯುತ್ತಿರುವುದು ಕಂಡು ಮತ್ತೊಬ್ಬರೂ ಸಹ ಖರೀದಿಸಿ, ಅದನ್ನು ಸವಿಯುತ್ತ ಮುಂದೆ ಸಾಗುತ್ತಾರೆ.
ಕಲಬುಗರ್ಿಯಲ್ಲಿ ಸದ್ಯಕ್ಕೆ ಜನರಿಗೆ ಬಿಸಿಲು, ಬಿಸಿ ಚಹಾ, ಮಿಚರ್ಿ ಬಜ್ಜಿ ಜೊತೆ ಕಡ್ಲೆಕಾಯಿಗಿಡ "ಪಸಂದ್"
ಆಗುತ್ತಿದೆ!
-ರಾಹುಲ ಬೆಳಗಲಿ