ನಾನು ನಿನ್ನ ಕಣ್ಣೀರಾದರೆ,
ಕಣ್ಣಂಚಿನಿಂದ ಇಳಿದು
ತುಟಿಯಂಚಿನಲ್ಲಿ ಸಾಯುವೆ,
ನೀನು ನನ್ನ ಕಣ್ಣೀರಾದರೆ,
ನಾನು ಅಳವುದೇ ಇಲ್ಲ,
ನಿನ್ನ ಕಳೆದುಕೊಳ್ಳುವ ಭಯದಿಂದ....
ಒಲವಿನ ಆಪ್ತ ಸಂಗಾತಿ ಎದುರ‍್ದಿದಾಗ, ಮಾತು ಕಿರಿಕಿರಿ ಅನ್ನಿಸುತ್ತದೆ. ಮೌನ ಆವರಿಸುವ ಹೊತ್ತಿಗೆ ಕಂಗಳು ಸಂವಹನ ನಡೆಸುತ್ತವೆ. ಎಲವೂ ಪರಸ್ಪರ ನೋಟದ್ಲಲೇ ವ್ಯಕ್ತವಾದಾಗ, ಜಾರಿ ಹೋಗುತ್ತಿರುವ ಕ್ಷಣಗಳನ್ನು ನ್ಲಿಲಿಸಲು ಮನಸ್ಸು ಹಾತೊರೆಯುತ್ತದೆ. ‘ಈ ಜಗತ್ತಿನ್ಲಲಿ ಇರೋದೇ ಎರಡು ಜೀವಿಗಳು. ನಾನು ಮತ್ತು ನೀನು. ಇಲಿ ಬೇರೆಯವರಿಗೆ ಪ್ರವೇಶ ನಿಷಿದ್ಧ. ಇದು ಅಲಿಖಿತ ನಿಯಮ’ ಎಂಬ ಪುಟ್ಟ ಒಪ್ಪಂದ. ಇಂತಹ ಒಪ್ಪಂದಗಳು ಅಸ್ತಿತ್ವಕ್ಕೆ ಬರುವ ದಿನ: ಫೆಬ್ರುವರಿ ೧೪-ಪ್ರೇಮಿಗಳ ದಿನ.
ಹೌದು! ಬಹುತೇಕ ಪ್ರೇಮಿಗಳನ್ನು ಒಂದುಗೂಡಿಸುವುದೇ ಮತ್ತು ಪರಸ್ಪರ ವಿಶ್ವಾಸ ಮೂಡಿಸುವುದೇ ಈ ರೀತಿಯ ಒಪ್ಪಂದ. ‘ನನಗೆ ನೀನು, ನಿನಗೆ ನಾನು’ ಎಂದು ಹೇಳಿಕೊಂಡು ಭಾಂಧವ್ಯದ ಕೊಂಡಿಯೊಂದು ಬೆಸೆದುಕೊಳ್ಳಲು ಪ್ರೇಮಿಗಳು ಆಯ್ಕೆ ಮಾಡಿಕೊಳ್ಳುವ ದಿನ ಫೆಬ್ರುವರಿ ೧೪. ಸಂತ ವ್ಯಾಲೆಂಟೈನ್ ಹೆಸರಿನ್ಲಲಿ ಆಚರಿಸಲಾಗುವ ಈ ದಿನವನ್ನು ಪ್ರತಿಯೊಬ್ಬ ಪ್ರೇಮಿಯೂ ಸಂಭ್ರಮಿಸದೇ ಇರುವುದಿಲ್ಲ.
೨೪ ಗಂಟೆಗಳೇನೂ,
ಇಡೀ ಜೀವನವನ್ನೇ ಸಮರ್ಪಿಸುವೆ,
ನಿನ್ನ ಆ ಮುಗುಳ್ನಗುವಿನ
ಒಂದು ಕ್ಷಣಕ್ಕಾಗಿ.....
‘ನೀನು ನನ್ನ ಜೊತೆಯ್ದಿದರೆ ಸಾಕು, ಇಡೀ ಜಗತ್ತನ್ನೇ ಎದುರಿಸುತ್ತೇನೆ’ ಎಂದು ಹೇಳಿಕೊಳ್ಳಲು ಅವಕಾಶ ಕೊಡುವ ಈ ದಿನವನ್ನು ಒಬ್ಬೊಬ್ಬರು ಒಂದೊಂದು ರೀತಿಯ್ಲಲಿ ಆಚರಿಸುತ್ತಾರೆ. ಕೆಲವರು ಒಲವಿನ ಸಂಗಾತಿಯ ಜೊತೆ ಇಡೀ ದಿನ ಕಳೆದುಬಿಟ್ಟರೆ, ಇನ್ನೂ ಕೆಲವರು ಶುಭಾಶಯ ಪತ್ರ-ಹೂಗಳನ್ನು ಕೊಟ್ಟು ಪ್ರೀತಿ ಹಂಚಿಕೊಳ್ಳುತ್ತಾರೆ. ಕೆಲಸದ ಜಂಜಾಟ ಮತ್ತು ಪೋಷಕರ ಭಯವ್ದಿದರೆ, ಮೊಬೈಲ್ ಫೋನ್‌ನ್ಲಲಿ ಪುಟ್ಟ ಪುಟ್ಟ ಎಸ್‌ಎಂಎಸ್‌ಗಳನ್ನು ಕಳುಹಿಸುವ ಮೂಲಕ ಪರಸ್ಪರ ಒಲವಿನ ದಿನದ ಶುಭಾಶಯ ಹೇಳಿಕೊಳ್ಳುತ್ತಾರೆ.
ಕಾಲೇಜುಗಳ್ಲಲಿ ಹುಡುಗಿಯರು ಹೆಚ್ಚಿನ ಸಂಖ್ಯೆಯ್ಲಲಿ ಕಾಣದ್ದಿದರೂ ಹುಡುಗರ ದಂಡು ಮಾತ್ರ ಭಾರಿ ಸಂಖ್ಯೆಯ್ಲಲಿರುತ್ತದೆ. ಒಬ್ಬನ ಕೈಯ್ಲಲ್ದಿದರೆ ಕೆಂಗುಲಾಬಿಯ್ದಿದರೆ, ಇನ್ನೂಬ್ಬ ಕೈಯ್ಲಲಿ ಪುಟ್ಟದಾದ ಚೀಟಿ. ಇಂಥವರ ನಡುವೆ ಕೆಲ ಜಾಣರೂ ಇರುತ್ತಾರೆ. ಕೆಂಗುಲಾಬಿ ನೀಡಿದ ನಂತರವೂ ಪ್ರೀತಿ ಸಿಗದ್ದಿದರೇನು, ಸ್ನೇಹವಾದರೂ ಸಿಗಲಿ ಎಂದು ಮರೆಯ್ಲಲಿ ಹಳದಿ ಗುಲಾಬಿ ಹಿಡಿದಿರುತ್ತಾರೆ.
ಬಯಸಿದ್ದೆಲ್ಲವೂ ಸಿಕ್ಕಿತು ನನಗೆ
ನೆಮ್ಮದಿ, ಶಾಂತಿ ಮತ್ತು ಸ್ಫೂರ್ತಿ,
ಇದಕ್ಕೆ ಕಾರಣ ಹುಡುಕಲೆತ್ನಿಸಿದಾಗ,
ಕಂಡಿದ್ದು ನೀನು ಮತ್ತು ನಿನ್ನ ಒಲವು....
ಆದರೆ ಪ್ರೀತಿ ಎಂಬುದು ಹುಡುಗಾಟಿಕೆ-ತುಂಟಾಟ ಅಷ್ಟೇ ಅಲ. ವ್ಯಕ್ತಿಯೊಬ್ಬನನ್ನು ನಂಬಿ ಇಡೀ ಜೀವನವನ್ನೇ ಸಮರ್ಪಿಸುವಂತೆ ಮಾಡುವ ಅಗಾಧ ಶಕ್ತಿ ಪ್ರೀತಿ. ಸಣ್ಣಪುಟ್ಟ ಮುನಿಸು-ವಿರಸದ ನಡುವೆಯೂ ದಿಢಿ ರ್‌ನೇ ನಗು ತರಿಸಬ್ಲಲ ಸಂಕೇತ ಪ್ರೀತಿ. ಕಾಲೇಜು ವಿದ್ಯಾರ್ಥಿಗಳ್ಲಲಿನ ಪ್ರೀತಿ-ಪ್ರೇಮ ಕೆಲ ವರ್ಷಗಳ ನಂತರ ಅಚ್ಚರಿ ಮೂಡಿಸದೇ ಇರುವುದ್ಲಿಲ. ಬಹುತೇಕ ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರೀತಿಯನ್ನು ಕಳೆದುಕೊಳ್ಳುವುದು ಅಥವಾ ಪಡೆದುಕೊಳ್ಳವುದೇ ಕಾಲೇಜಿನ ದಿನಗಳಲ್ಲಿ.
ಅದೇ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡು ದೊಡ್ಡ ವ್ಯಕ್ತಿಯಾಗಿ ಕಾಲೇಜು ದಿನಗಳನ್ನು ನೆನಪಿಸಿಕೊಂಡರೆ ತಮ್ಮ ಪ್ರೀತಿ-ಪ್ರೇಮದ ಕ್ಷಣಗಳನ್ನು ಕಂಡು ಮನದಲ್ಲೇ ನಗುತ್ತಾರೆ. ಹುಚ್ಚು ಮತ್ತು ಅತಿರೇಕದ ಪ್ರೇಮದ ಕ್ಷಣಗಳನ್ನು ಪದೇ ಪದೇ ಕೆದಕುತ್ತಾರೆ.
ಆತಂಕವಿದ್ದರೂ ಪುಟ್ಟ ಧೈರ್ಯ
ಸೋಲಿನಲ್ಲೂ ಚಿಕ್ಕ ಗೆಲುವು
ಅವಮಾನದಲ್ಲೂ ಕಿರಿದಾದ ಆತ್ಮವಿಶ್ವಾಸ
ಈ ಎಲವನ್ನೂ ಕಲಿಸಿದ ನಿನ್ನ ಮರೆಯುವುದು ಸಾಧ್ಯವೇ?...
ಒಬ್ಬ ವ್ಯಕ್ತಿಯಿಂದ ಭೌತಿಕವಾಗಿ ಏನೂ ಸಿಗದ್ದಿದರೂ ಚಿಂತೆಯ್ಲಿಲ. ‘ಜೊತೆಯಿರುತ್ತೇನೆ, ಪ್ರತಿ ಕ್ಷಣವೂ ಮತ್ತು ಪ್ರತಿ ಹೆಜ್ಜೆಯ್ಲಲೂ’ ಎಂಬ ಮಾತು ವ್ಯಕ್ತಿಯ ಬಲ ತುಂಬುವುದ್ಲಲದೇ ಮಾನಸಿಕ ಸ್ಥೈರ್ಯ ನೀಡಲು ಸಹ ಕಾರಣವಾಗುತ್ತದೆ. ಇಡೀ ಜಗತ್ತು ತನ್ನ ಮೇಲೆ ನಂಬಿಕೆ ಕಳೆದುಕೊಂಡರೂ ಮತ್ತು ಪದೇ ಪದೇ ಅವಮಾನ ಮಾಡಿದರೂ ಬೇಸರವ್ಲಿಲ. ‘ಪ್ರೀತಿಸಿದ ಸಂಗಾತಿ ನನ್ನ ಮೇಲೆ ವಿಶ್ವಾಸ ಕಳೆದುಕೊಂಡ್ಲಿಲ, ಅವಮಾನದ ನೆಪವನ್ನೊಡ್ಡಿ ದೂರವಾಗ್ಲಿಲ’ ಎಂಬ ಭಾವನೆ ಮನಸ್ಸಿನ್ಲಲಿ ಮೂಡಿದರೆ ಸಾಕು. ಹೋದ ಜೀವ ಮತ್ತೆ ಬಂದಂತೆ, ಕಳೆದು ಹೋಗಿದ್ದ ಆತ್ಮವಿಶ್ವಾಸ ಮತ್ತೆ ಸಿಕ್ಕಂತೆ.
ನನ್ನ ಪ್ರೀತಿ, ಪ್ರೇಮ, ಒಲುಮೆ ನಿನಗೆ
ಒಂದರ್ಥದಲ್ಲಿ ಎಲ್‌ಐಸಿ ಬಾಂಡ್ ಇದ್ದಂತೆ,,
ಇರುತ್ತದೆ ಪ್ರತಿಕ್ಷಣ,
ಜೀವನದ ಜೊತೆಗೂ, ಜೀವನದ ನಂತರವೂ....
ಈ ಒಂದು ಮಾತಿಗಾಗಿ ಎದುರು ನೋಡುವ ಸಂಗಾತಿಗೆ ಜೀವನದ ನಂತರವೂ ನಂಟು ಉಳಿಸಿಕೊಳ್ಳುವ ಹಂಬಲ. ಪುನರ್‌ಜನ್ಮ ಎಂಬುದರ‍್ಲಲಿ ನಂಬಿಕೆ ಇಲದ್ದಿದರೂ ಮತ್ತು ಅದು ಅಸಹಜ ಎಂಬ ಅಳುಕು ಪದೇ ಪದೇ ಕಾಡುತ್ತ್ದಿದರೂ ಮನಸ್ಸು ‘ನಮ್ಮ ಪ್ರೇಮ ಅತೀತ ಮತ್ತು ಅಮರ’ ಎಂದು ಪಿಸುಗುಡುತ್ತಿರುತ್ತದೆ.
No comments:
Post a Comment