Sunday, January 23, 2011

ಪ್ರಕರ ಸೂರ್ಯ ಮುಳುಗಿದ ನಂತರ... ಆಕಾಶದಲ್ಲಿ ಬಣ್ಣದ ಚಿತ್ತಾರ


ದಿನಪೂರ್ತಿ ಪ್ರಕರವಾಗಿ ಉರಿದರೂ ಸ್ವಲ್ಪವೂ ಬಳಲಿಕೆಯನ್ನು ತೋರ್ಪಡಿಸದೇ ನಿಧಾನವಾಗಿ ಅತ್ತ ಸೂರ್ಯ ಕಣ್ಮರೆಯಾಗುತ್ತಿದ್ದರೆ, ಇತ್ತ ಅದಕ್ಕಾಗಿ ಕಾತರವಾಗಿದ್ದವು ಎಂಬಂತೆ ಬಾನಂಗಳದ ಬಣ್ಣಗಳು ಜೀವ ತಳೆಯುತ್ತಿದ್ದವು. ಆಹಾರ ಹುಡುಕುತ್ತ ದೂರದೂರಕ್ಕೆ ಹೋಗಿದ್ದ ಚಿಲಿಪಿಲಿ ಹಕ್ಕಿಗಳು ಗೂಡಿಗೆ ಮರಳುತ್ತಿದ್ದರೆ, ಅರಳಿದ್ದ ಹೂಗಳು ಕಣ್ಣಿನ ರಪ್ಪೆ ಮುಚ್ಚಿಕೊಳ್ಳುವಂತೆ ಪಕಳೆಯನ್ನು ಸೆಳೆದುಕೊಳ್ಳುತ್ತಿದ್ದವು. ಇಡೀ ದಿನದ ಜಂಜಾಟ, ಓಡಾಟ ಎಲ್ಲವನ್ನೂ ಆ ಕ್ಷಣಕ್ಕೆ ಮರೆತು ಹಿರಿಯರು ಮನೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಕಿರಿಯರು ಇಷ್ಟು ಸಮಯ ಸಿಕ್ಕಿದ್ದೇ ಸಂಭ್ರಮ ಎಂಬಂತೆ ಆಟ-ತುಂಟಾಟದಲ್ಲಿ ನಿರತರಾಗಿದ್ದರು. ಭಾನುವಾರದ ಸಂಜೆ ಎಂದಿನಂತಿರಲಿಲ್ಲ. ಆಕಾಶದತ್ತ ನೋಡಿದರೆ, ಕೆಲ ನಿಮಿಷಗಳಿಗಾದರೂ ಇಡೀ ದಿನದ ದುಗುಡ, ಆತಂಕ ಎಲ್ಲವನ್ನೂ ಕೆಲ ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ, ನೆಮ್ಮದಿ-ನಿರಾಳಭಾವದಿಂದ ಇರಲು ಮನಸ್ಸು ಬಯಸುತಿತ್ತು.
ಭೂಮಿಯಲ್ಲಿನ ಎಲ ಚಲನವಲನಗಳನ್ನು ಮರೆತು ಆಕಾಶವನ್ನು ಅಪ್ಪಿಕೊಳ್ಳುವ ಹಾಗೆ ನೋಡುತ್ತ್ತ ನಿಂತರೆ, ಪರಿಣಿತ ಕಲಾವಿದನೊಬ್ಬ ಇಡೀ ಆಕಾಶವನ್ನೇ ಕ್ಯಾನ್ವಸ್ ಮಾಡಿಕೊಂಡು ಚಿತ್ತಾರ ಮೂಡಿಸಿದ್ದಾನೆ ಎಂಬ ಅರ್ಥ ವ್ಯಕ್ತವಾಗುವತಿತ್ತು. ಸಾಲು ಸಾಲು ಮರಗಳ ನಡುನಡುವೆ ಇಣುಕುವ ನೀಲಿ ಮಿಶ್ರಿತ ಚೆಂದದ ಕೆಂಪು ಬಣ್ಣ್ಣ, ಗಾಳಿ ಬೀಸಿದಾಗಲ್ಲೆಲ ಮಿಸುಕಾಡುತ್ತಿದ್ದ ಎಲೆಗಳು ಒಂದೊಂದೇ ಭಾವವನ್ನು ಸಂಕೋಚದಿಂದಲೇ ತಿಳಿಪಡಿಸುತ್ತಿದ್ದವು. ಪ್ರಕರ ಸೂರ್ಯ ಕೆಲ ಹೊತ್ತು ದೂರವಾದರೇನು ಸೌಂದರ್ಯ ಕಳೆಗುಂದುವುದಿಲ್ಲ ಎಂದು ಆಕಾಶ ತನ್ನ ಬಣ್ಣಗಳ ಮೂಲಕ ಸಾದರಪಡಿಸಿದರೆ, ಕತ್ತಲು ಆವರಿಸಿದರೂ ಜೀವಸಂಕುಲದ ಸಂಚಲನ ನ್ಲಿಲುವುದ್ಲಿಲ ಎಂದು ಎಲೆಗಳು ಮಿಸುಕಾಟದ್ಲಲೇ ತಿಳಿಸುತ್ತ್ದಿದವು. ಈ ಎಲದಕ್ಕೂ ಸಾಕ್ಷಿ ಎಂಬಂತೆ ಕತ್ತಲು ಆವರಿಸುತ್ತಿದ್ದಂತೆ ಕೀಟಗಳು ಕಿರ್ರನೆ ಶಬ್ದ ಮಾಡತೊಡಗಿದವು.
ಮುಂಜಾವಿನ ಮಂಜು ಮತ್ತು ರಾತ್ರಿಯ ಚಳಿಯನ್ನು ಆವರಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯು ಭಾನುವಾರ ಸಂಜೆಯ ಸವಿಯನ್ನು ಸಹ ಅನುಭವಿಸಿತು. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತ್ಲಾಲೂಕುಗಳ ಗಡಿಭಾಗದ್ಲಲಿ ನಿಂತು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಾಗ, ದೂರದ್ಲಲಿ ಎಲೋ ಆಕಾಶ-ಭೂಮಿ ಮಿಳಿತವಾದಂತೆ ಅದಕ್ಕೆ ಬಗೆಬಗೆಯ ಬಣ್ಣಗಳು ಕಾರಣವಾದಂತೆ ಕಂಡು ಬರುತ್ತಿದ್ದವು. ಕೆಲ ಹೊತ್ತು ದಿಟ್ಟಿಸಿ ನೋಡಿದರೆ, ಬಣ್ಣಗಳು ಪರಸ್ಪರ ಮಾತನಾಡಿಕೊಂಡು ಭೂಮಿಯ ಮೇಲೆ ನೀರಿನಂತೆ ಹರಿಯಲು ಯೋಜನೆ ರೂಪಿಸುತ್ತಿವೆ ಎಂಬಂತೆ ಸಣ್ಣ ಅನುಮಾನ ವ್ಯಕ್ತವಾಗುತಿತ್ತು. ಒಂದು ವೇಳೆ ಹಾಗೆ ನೀರು ಹರಿದು ಬಂದಲ್ಲಿ, ಅದನ್ನು ಪುಟ್ಟದಾದ ಡಬ್ಬಿಯಲ್ಲಿ ಹಿಡಿದಿಟ್ಟುಕೊಳ್ಳಲು ತುಂಟ ಮನಸ್ಸು ಸಂಚು ನಡೆಸಿತ್ತು.
ಕವಿ ಮನಸ್ಸಿನವರು, ಜನಸಾಮಾನ್ಯರು ಹೀಗೆ ರೋಮಾಂಚನದಿಂದ ಬೇರೆ ಬೇರೆ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದರೆ ವಿಜ್ಞಾನಿಗಳು. ಭೂಗೋಳ ಅರಿತುಕೊಂಡವರು ಬೇರೆಯದ್ದೇ ವಾದ ಮಂಡಿಸುತ್ತಿದ್ದರು. ಸೂರ್ಯ ಮುಳುಗುವ ಹೊತ್ತು ಹೀಗೆ ಚೆಂದ ಕಾಣಲು ಹಲವು ಕಾರಣಗಳಿವೆ. ಕವನದ ಸಾಲುಗಳಲ್ಲಿ ಅಲ್ಲ, ವೈಜ್ಞಾನಿಕ ಅಂಶಗಳಿಂದಲೇ ತಿಳಿದುಕೊಳ್ಳಬೇಕು ಎಂಬುದು ಅವರು ಅನಿಸಿಕೆ. ಅದಕ್ಕಾಗಿ ವೈಜ್ಞಾನಿಕ ಕಾರಣಗಳನ್ನು ಆಗು-ಹೋಗುಗಳನ್ನು ಸಹ ಅವರು ಬಿಡಿಸಿಟ್ಟರು.
’ಬೆಳಕು ತನ್ನ ಹಾದಿಯಲ್ಲಿಯ ನಿಲಂಬಿತ ಸೂಕ್ಷ್ಮಕಣಗಳೊಂದಿಗೆ ವರ್ತಿಸಿ ದಿಕ್ಕು ಬದಲಾಯಿಸಿಕೊಳ್ಳುವುದಕ್ಕೆ ಬೆಳಕಿನ ಚೆದರಿಕೆ ಎಂಬ ಹೆಸರು. ಆಕಾಶದ ನೀಲಿ ಬಣ್ಣವು ನಿಲಂಬಿತ ಧೂಳುಕಣಗಳಿಂದ ಉಂಟಾಗುವ ಬೆಳಕಿನ ಚೆದರಿಕೆಯಿಂದಲೇ ಆಗಿರುವುದು’ ಎಂದು ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ.
’ಮುಳುಗುವ ಸಮಯದಲ್ಲಿ ದಿಗಂತಕೆ ಸೂರ್ಯ ಸಮೀಪವಿರುತ್ತಾನೆ. ಆಗ ಬೆಳಕಿನ ಕಿರಣಗಳು ಭೂಮಿಯ ವಾತಾವರಣದಲ್ಲಿ ಹೆಚ್ಚು ದೂರ ಹಾಯಬೇಕಾಗುತ್ತದೆ. ಆದ್ದರಿಂದ ಹೆಚ್ಚು ಸಂಖ್ಯೆಯ ಧೂಳು ಕಣಗಳು ಅಣುಗಳು ಚೆದರಿಕೆಯನ್ನು ಉಂಟುಮಾಡುತ್ತವೆ. ನೀಲಿ ಮತ್ತು ನೇರಳೆ ಬೆಳಕು ಸೂರ್ಯನನ್ನು ನಾವು ನೋಡುವ ದಿಕ್ಕಿಗೆ ಲಂಬವಾಗಿ ಚದುರಿಹೋಗುತ್ತವೆ. ಕಡಿಮೆ ಆವರ್ತಾಂಕದ ಕೆಂಪು ಬೆಳಕು ಹೆಚ್ಚು ಚದರದೆ ನೇರವಾಗಿ ಬರುತ್ತದೆ. ಇದರಿಂದಲೇ ಸೂರ್ಯ ಕಿತ್ತಳೆ ಕೆಂಪಾಗಿ ಕಾಣಿಸುವುದು’ ಎಂದು ಅವರು ಹೇಳಿದರು.
ಸೂರ್ಯ ಮೂಡುವಾಗ ಇರುವುದಕ್ಕಿಂತ ಮುಳುಗುವಾಗ ಈ ಬಣ್ಣಗಳ ಬೆಡಗು ಹೆಚ್ಚು. ಏಕೆಂದರೆ ಹಗಲಿನಲ್ಲಿ ಮಾನವ ಸೇರಿದಂತೆ ಎಲ್ಲ ಜೀವಿಗಳ ಚಟುವಟಿಕೆಯಿಂದಾಗಿ ಸೂರ್ಯ ಮುಳುಗುವ ಹೊತ್ತಿಗೆ ವಾತಾವರಣದಲ್ಲಿ ಧೂಳು ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಭೂಮಟ್ಟದ ಮೋಡವೆನ್ನಬಹುದಾದ ಮಂಜು ಆವರಿಸಿರುತ್ತದೆ. ಭೂಮಿಯ ಉಷ್ಣತೆಯನ್ನು ರಕ್ಷಿಸುವ ಮೋಡದ ಮುಸುಕು ಇರುವುದಿಲ್ಲ. ಹಾಗಾಗಿ ಆಗಸದಲ್ಲಿ ಬಣ್ಣದ ಓಕುಳಿಗೆ ಅದ್ಭುತ ಕ್ಯಾನ್ವಸ್ ಸಿಕ್ಕಿಬಿಡುತ್ತದೆ’ ಎಂದು ಅವರು ತಿಳಿಸಿದರು.

No comments:

Post a Comment