Sunday, January 23, 2011

ಹೊಸ ವರ್ಷ ಆಗಮನ.... ಸಂತಸ, ಸಂಭ್ರಮ, ನೆಮ್ಮದಿಯ ನಿರೀಕ್ಷೆ


ಕತ್ತಲ ಕಣಿವೆಯ ತುದಿಯ್ಲಲೊಂದು ಬೆಳಕ ಮೂಡಿದಂತೆ, ಬಾಯಾರಿದವನಿಗೆ ದೂರದ್ಲಲಿ ನದಿಯೊಂದು ಕಂಡಂತೆ, ಕಾನನದ್ಲಲಿ ಪ್ರಾಣಿಗಳ ಘರ್ಜನೆಯ ನಡುವೆ ಹಕ್ಕಿಗಳ ಚಿಲಿಪಿಲಿ ಕೇಳಿದಂತೆ, ಎಲವನ್ನೂ ಕಳೆದುಕೊಂಡ ನಂತರವೂ ವಿಶಿಷ್ಟವಾದ್ದದು ಸಿಕ್ಕಂತೆ, ಹಲವು ಆತಂಕ-ಅಸಮಧಾನಗಳ ನಡುವೆ ನೆಮ್ಮದಿ ಕಂಡುಕೊಂಡಂತೆ
....ನವ ವರ್ಷ ಬಂದಿದೆ. ೨೦೧೦ಕ್ಕೆ ವಿದಾಯ ಹೇಳಿ ಬಂದಿರುವ ನೂತನ ವರ್ಷ ಹಲವು ಆಶೋತ್ತರ, ಸಂಭ್ರಮ ಮತ್ತು ಸಂತೋಷವನ್ನು ಹೊತ್ತು ತಂದಿದೆ. ಸಮಸ್ಯೆ-ಸಂಕಷ್ಟಗಳು ಆಯಾ ವರ್ಷದ ಕಡೆಯ ದಿನದಂದೇ ಕೊನೆಯಾಗಲಿ ಎಂದು ಹರಿಸುತ್ತಿರುವವರಿಗೆ ಪೂರಕರವಾಗಿ ಬಂದಿರುವ ಈ ವರ್ಷ ಹಲವು ನಿರೀಕ್ಷೆಗೂ ಕಾರಣವಾಗಿದೆ.
ಈ ವರ್ಷ ಹೇಗಾದರೂ ಕಷ್ಟಪಟ್ಟು ಮನೆ ಕಟ್ಟಿಸಬೇಕು ಎಂಬ ಗುರಿ ಒಬ್ಬರಲ್ಲಿದ್ದರೆ, ಎಂಥ್ದದೇ ಅಡಚಣೆಗಳು ಎದುರಾದರೂ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಹಠ ಮತ್ತೊಬ್ಬರಲ್ಲಿ. ಬರುವ ಸಣ್ಣ ಪ್ರಮಾಣದ ಸಂಬಳದಲ್ಲಿ ತಾಯಿ-ತಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಂಬಲ ಮಗನಿಗೆ ಇದರೆ, ಒಳ್ಳೆಯ ಹುಡುಗನನ್ನು ನೋಡಿ ಮಗಳ ಮದುವೆ ಮಾಡಬೇಕು ಎಂದು ಅಪ್ಪನ ಚಿಂತೆ. ಬಸ್-ಟ್ರೇನ್‌ಗಳು ಸಾಕು, ಕಾರ್‌ನಲ್ಲಿ ಹೋಗುವ ಕನಸು ಒಬ್ಬರಿಗ್ದಿದರೆ, ದೇಶ ಸುತ್ತಿದ್ದು ಸಾಕು-ವಿದೇಶ ನೋಡಬೇಕು ಎಂಬ ಆಶಯ ಮತ್ತೊಬ್ಬರಿಗೆ. ಪರೀಕ್ಷೆಯ ಚಿಂತೆ ಮಕ್ಕಳಿಗೆ ಇದರೆ, ಘಟಿಕೋತ್ಸವದ್ಲಲಿ ಚಿನ್ನದ ಪದಕ ಗೆಲ್ಲುವ ಸಂಭ್ರಮ
ಸ್ನಾತಕೋತ್ತರ ಪದವೀಧರರಿಗೆ.
ಇದ್ಯಾವುದರ ಗೊಡವೆಯೇ ಇರದ ಬಡಜೀವಿ ಮಾತ್ರ ತನ್ನ ಪಾಡಿಗೆ ತಾನು ದುಡಿದು, ಆಯಾ ದಿನದ ದುಡಿಮೆಯಲ್ಲಿ ಊಟ ಮಾಡಿದರೆ ನೆಮ್ಮದಿ. ಬೃಹತ್ ಬಂಗಲೆಯ್ಲಲ, ಹೆಂಚಿನ ಮನೆಯ್ಲಲೂ ಕೂಡ ವಾಸವಿರದ ಬಡಪಾಯಿ ಪುಟ್ಟ ಗುಡಿಸಲಿನಲ್ಲೆ
ಜೀವನ ನಡೆಸುತ್ತಾನೆ. ಹಾಸಿಗೆ ಇದಷ್ಟು ಕಾಲು ಚಾಚಬೇಕು ಎಂಬ ಅಲಿಖಿತ ನಿಯಮ ತಿಳಿಯದಿದ್ದರೂ ಅದನ್ನು ತಿಳಿದಂತೆಯೇ ಪಾಲಿಸುವ ಆತನಿಗೆ ಪ್ರತಿದಿನವೂ ಹೊಸ ವರ್ಷವ್ದಿದಂತೆ. ಒಳ್ಳೆಯ ದುಡಿಮೆಯಾದ ದಿನದಂದು ಕುಟುಂಬ ಸದಸ್ಯರ ಜೊತೆ ಹೊಟ್ಟೆ ತುಂಬ ಊಟ ಮಾಡಿದರೆ, ಅದೇ ಹೊಸ ವರ್ಷದ ಸಂಭ್ರಮ. ಅತಿಯಾದ ಆಸೆಯೂ ಇಲ್ಲ, ನಿರಾಸೆಯೂ ಪಡಬೇಕಿಲ್ಲ.
ಹಲವು ವೈಫಲ್ಯಗಳು ಎದುರಾದರೂ ಒಂದ್ಲಿಲೊಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ ಎಂಬ ಭಾವನೆಯ್ಲಲಿ ಜೀವನ ಮಾಡುತ್ತಿರುವ ಯುವಜನರಿಗೆ ಈ ವರ್ಷ ಒಂದರ್ಥದಲ್ಲಿ ದಾರಿದೀಪ, ಅವಕಾಶಗಳ ಖಣಿಯೂ ಹೌದು. ‘ನನ್ನದು ಎಂ.ಎ ಆಗಿದೆ. ಡಿಗ್ರಿ ಪಡೆದಾಗ ತುಂಬ ಸಂತೋಷಪಟ್ಟ್ದಿದೆ. ನನ್ನ ವಿದ್ಯಾರ್ಹತೆ ಮತ್ತು ಪ್ರತಿಭೆಗೆ ಕೆಲಸ ಬೇಗನೇ ಸಿಗುತ್ತದೆ ಎಂದು ಭಾವಿಸ್ದಿದೆ. ಎಲ ಕಡೆಗೂ ಅರ್ಜಿ ಹಾಕಿದೆ. ಸಂದರ್ಶನಗಳಿಗೆ ಹಾಜರಾದೆ. ಕೇಳಿದ ಪ್ರಶ್ನೆಗಳಿಗ್ಲೆಲ ಉತ್ತರಿಸಿದೆ. ಆದರೆ ನೇಮಕಾತಿ ಪತ್ರ ನನಗೆ ಸಿಗಲ್ಲಿಲ. ಅದಕ್ಕೆ ಈಗ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತ್ದಿದೇನೆ. ಕುಟುಂಬ ನಿರ್ವಹಿಸಲಾಗದಂತಹ ವೇತನ ಸಿಗದ್ದಿದರೆ, ನಾನು ಕೆಲಸ ಮಾಡುವುದಾದರೂ ಹೇಗೆ? ಎಲರ ಮುಖದ್ಲಲೂ ಸಂತೋಷ ಕಾಣುವುದಾದರೂ ಯಾವಾಗ? ೨೦೧೦ ನಿರಾಶೆಗೊಳಿಸಿದ ಹಾಗೆ ೨೦೧೧ ಬೇಸರ ಮಾಡಿಸುವುದ್ಲಿಲ ಎಂಬ ನಂಬಿಕೆ ಇದೆ. ಈ ವರ್ಷ ಹಲವು ಕನಸುಗಳನ್ನು ನನಸು ಮಾಡುವ ಉದೇಶವಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ನಿವಾಸಿ ರಾಜಶೇಖರ್.
ನಗರದಲ್ಲಿ ವಾಸಿಸುವ ವಿದ್ಯಾವಂತ ಯುವಜನರಷ್ಟೇ ಅಲ್ಲ, ಗ್ರಾಮಗಳಲ್ಲಿರುವ ರೈತರು ಕೂಡ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ.ನವೆಂಬರ್ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮನೆಗಳನ್ನು ಕಳೆದುಕೊಳ್ಳುವುದರ ಜೊತೆಗೆ ಆರ್ಥಿಕ ನಷ್ಟವನ್ನು ಅನುಭವಿಸಿದ ಬಹುತೇಕ ರೈತರು, ‘ಹೊಸ ವರ್ಷವು ಎಲರ ಬಾಳು-ಬದುಕಿನಲ್ಲೂ ಸುಖ ಸಂತೋಷದ ಸೆಲೆಯನ್ನು ಹರಿಸಲಿ’ ಎಂದು ಮನದಲ್ಲಿ ತಮಷ್ಟಕ್ಕೆ ತಾವೇ ಹರಕೆ ಹೊರುತ್ತಿದ್ದಾರೆ. ‘ಹೊಸ ವರ್ಷ ಎಲರಿಗೂ ಒಳ್ಳೆಯದು ಮಾಡಲಿ’ ಎಂದು ಪರಸ್ಪರ ಶುಭ ಹಾರೈಸಿಕೊಳ್ಳುತ್ತ ಸಂತೋಷದ್ಲಲಿರುವ ಪ್ರತಿಯೊಬ್ಬರು ಹೊಸ ಆಕಾಂಕ್ಷೆ ಮತ್ತು ನಿರೀಕ್ಷೆಗಳ ಈಡೇರಿಕೆಯನ್ನು ಎದುರು ನೋಡುತ್ತಿದ್ದಾರೆ.

No comments:

Post a Comment