Monday, December 19, 2016

ಕಲಬುಗರ್ಿಯ ನಿಗೂಢ ಬಿಸಿಲು ಮತ್ತು ಕಡ್ಲೆಕಾಯಿಗಿಡ ಪರಿಷೆ!






ಕಲಬುಗರ್ಿಯ ನಿಗೂಢ ಬಿಸಿಲು ಮತ್ತು ಕಡ್ಲೆಕಾಯಿಗಿಡ ಪರಿಷೆ!

ಕಲಬುಗರ್ಿಗೆ ವರ್ಗವಾದ ವಿಷಯ ತಿಳಿಸಿ ಹೆಚ್ಚೇನೂ ಸಮಯ ಆಗಿರಲಿಲ್ಲ. ಇಲ್ಲಿನ ಬಿಸಿಲು ಕುರಿತು ಕೆಲ ಆಪ್ತರು ಹವಾಮಾನ ವರದಿ ಸಿದ್ಧಪಡಿಸಿ, ಮಾಹಿತಿ ನೀಡತೊಡಗಿದರು. ಅವರ ವರದಿ ಮತ್ತು ವರ್ಣನೆ ಸೂಕ್ಷ್ಮವಾಗಿ ಅರಿಯಲು ಪ್ರಯತ್ನಿಸಿದಷ್ಟು ಬಿಸಿಲು ಇನ್ನಷ್ಟು ನಿಗೂಢವಾಯಿತು. ಹಿರಿಯರೊಬ್ಬರು ತಡ ಮಾಡದೇ ಸ್ಪಷ್ಟವಾದ ಒಂದು ವಾಕ್ಯದ ವರದಿ ಪ್ರಕಟಿಸಿಬಿಟ್ಟರು: ಕಲಬುಗರ್ಿಯಲ್ಲಿ ಇರೋದು ಎರಡೇ ಕಾಲ. ಒಂದು ಹೆಚ್ಚು ಬಿಸಿಲುಗಾಲ, ಮತ್ತೊಂದು ಅತಿ ಹೆಚ್ಚು ಬಿಸಿಲುಗಾಲ.

ಬಿಸಿಲಿನ ಕುರಿತು ಸಮಗ್ರ ಅಧ್ಯಯನ ಮಾಡುವ ವೇಳೆಗೆ ಹಾರೈಕೆಗಳು ಬರತೊಡಗಿದವು. "ಬಿಸಿಲುನಾಡಿಗೆ ಹೊರಟಿದ್ದೀರಿ. ಶುಭವಾಗಲಿ" ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, "ಸುಡುವ ಬಿಸಿಲಿನಲ್ಲಿ ಬದುಕು ಕಷ್ಟ" ಎಂದು ಕಾಳಜಿ ತೋರಿದರು, "ಅಂತಹ ಬಿಸಿಲಲ್ಲಿ ಹೇಗೆ ಇರುತ್ತೀರಿ" ಎಂದು ಒಬ್ಬರು ಕಳಕಳಿ ವ್ಯಕ್ತಪಡಿಸಿದರೆ, "ಅಲ್ಲಿ ಬಿಸಿಲು, ಚಳಿ, ಮಳೆ ಎಲ್ಲವೂ ಒಂದೇ" ಎಂದು ಮತ್ತೊಬ್ಬರು ಸಮಾನತೆ ಮಾತನ್ನು ಬೋಧಿಸಿದರು. "ಇಲ್ಲಿನ ಬಿಸಿಲು ಅಂತಹ ಅಪಾಯಕಾರಿಯೇನಲ್ಲ" ಎಂದು ಇನ್ನೊಬ್ಬರು ಧೈರ್ಯ ತುಂಬಿದರು.

ಚಿಕ್ಕಬಳ್ಳಾಪುರ ತೊರೆದು ಕಲಬುಗರ್ಿ ಬರುವ ವೇಳೆಗೆ ಬಿಸಿಲಿನ ಹಲವು ಮುಖಗಳು ನನಗೆ ಗೊತ್ತಿಲ್ಲದಂತೆ ಪರಿಚಯವಾದವು. ಬಿಸಿಲಿನ ಪ್ರತಾಪದ ಕುರಿತು ಥಿಯರಿ ಸಾಕು, ಇನ್ನೇನಿದ್ದರೂ ಪ್ರಾಕ್ಟಿಕಲ್ ಆಗಿ ಅದರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂದು ಅನ್ನಿಸಿತು. ಅದಕ್ಕಾಗಿ ಮಾನಸಿಕ, ದೈಹಿಕವಾಗಿ ಸಿದ್ಧತೆ ಮಾಡಿಕೊಂಡೆ. ಅದೇ ಹಾದಿಯಲ್ಲಿ ಮುನ್ನಡೆದು ಈಗ 7ನೇ ತಿಂಗಳಿಗೆ ಕಾಲಿರಿಸಿದ್ದೇನೆ. ಬಿಸಿಲಿನ ಜೊತೆ ಒಡನಾಟ ಬೆಳೆಸಿಕೊಂಡಿದ್ದೇನೆ. ಅದರೊಂದಿಗೆ ಸ್ನೇಹ ವೃದ್ಧಿಸಿಕೊಳ್ಳುವ ಯತ್ನದಲ್ಲಿದ್ದೇನೆ.

ಬಿಸಿಲು ಈವರೆಗೆ ನನಗೆ ಸ್ನೇಹಮಯಿಯಾಗಿದ್ದು, ಕ್ರಮೇಣ ಆಪ್ತವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ಆದರೆ ಇಲ್ಲಿನ ಜನರೊಂದಿಗೆ ಬಿಸಿಲು ಆಪ್ತವಾಗಿದೆಯಲ್ಲದೇ ಜೀವಾಳ ಕೂಡ ಆಗಿದೆ. ಅಂತಹ ಬೆಸುಗೆ ಇಲ್ಲಿನ ಜನರೊಂದಿಗೆ ಅದು ಬೆಸೆದುಕೊಂಡಿದೆ. ಸುಡುಸುಡುವ ಬಿಸಿಲು ಇದ್ದರೇನೆ ಇಲ್ಲಿನ ಜನರು ಕೊಂಚ ಚುರುಕು. ಮೋಡ ಮುಸುಕಿದ ವಾತಾವರಣ ಅಥವಾ ಚಳಿಯಿದ್ದರೆ, ಅದಕ್ಕೆ ತಕ್ಕಂತೆ ಇಲ್ಲಿನ
ಜನರು ಮನೆಯಲ್ಲೇ ಇರಲು ಬಯಸುತ್ತಾರೆ. ಬಿಸಿಲಿಗಾಗಿ ಚಡಪಡಿಸುತ್ತಾರೆ.

ಬಿಸಿಲಿಗಾಗಿ ಜನರು "ಪರೇಶಾನ" ಆಗುವುದು ಅಥವಾ ಅದರ ನಿರೀಕ್ಷೆಯಲ್ಲಿರುವುದು ಕಂಡಿದ್ದೇನೆ. "ಮೋಡ ಮುಸುಕಿದ ವಾತಾವರಣದಲ್ಲಿ ಯಾವುದೇ ಕೆಲಸ ಮಾಡಲಿಕ್ಕೂ ಮನಸ್ಸು ಬರಲ್ರಿ. ಮಳೆ, ಚಳಿಯಿದೆ ಅಂತ ಎಷ್ಟು ದಿನ ಮನೆಯಲ್ಲಿ ಕೂರಲು ಸಾಧ್ಯ" ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದ್ದರು.
"ಸರ್ರ, ಬಿಸಿಲು ಇರಬೇಕ್ರಿ. ನಮಗ ಚಳಿ ಆಗ ಬರಂಗಿಲ್ರಿ. ಮನಿ ಮತ್ತು ಆಫೀಸಿನದ್ದು ಎಸಿ, ಫ್ಯಾನು ಬಂದ್ ಮಾಡ್ಕೊಂಡು ಇರಬೋದ್ರಿ. ಆದರೆ ಬಿಸಿಲು ಇಲ್ಲದೇ ಇರೋದು ಹೆಂಗ್ರಿ" ಎಂದು ಮತ್ತೊಬ್ಬರು ಹೇಳಿದ್ದು ಕಿವಿಯಲ್ಲಿ ಇನ್ನೂ ಗುಂಯ್ಯಗುಟ್ಟುತ್ತಿದೆ.

ಇದೇನಿದು ಬಿಸಿಲು ಇಲ್ಲಿನ ಜನರ ಈ ಪರಿ ಜಾದೂ ಮಾಡಿದೆಯೆಂದು ಬೀದಿಯಲ್ಲಿ ಹುಡುಕಿ ಹೊರಟರೆ, ಅಜೀಬ್ ದೃಶ್ಯಗಳು ಎದುರಾದವು. ಸುಡುಸುಡುವ ಬಿಸಿಲಿದ್ದರೂ ಯಾರೊಬ್ಬರ ತಲೆ ಮೇಲೆ ಟೋಪಿ ಇರಲಿಲ್ಲ, ಕೈಯಲ್ಲಿ ಛತ್ರಿ ಇರಲಿಲ್ಲ. ಕೆಲ ಯುವತಿಯರು ಮತ್ತು ಮಹಿಳೆಯರು ಮುಖದ ಸುತ್ತಲೂ ತೆಳುವಾದ ಬಟ್ಟೆ ಹಾಕಿಕೊಂಡಿದ್ದು ಬಿಟ್ಟರೆ, ಅವರೂ ಸಹ ಛತ್ರಿ ಹಿಡಿದಿರಲಿಲ್ಲ. ಬೀದಿ ವ್ಯಾಪಾರಸ್ಥರು, ವೃದ್ಧರು ಮತ್ತು ಇತರರು ಬಿಸಿಲಿನಿಂದ ಕೊಂಚವೂ ಕೂಡ "ಹೈರಾಣ" ಆದಂತೆ ಕಾಣಲಿಲ್ಲ.

ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ಬಳಿ ಹೋಗಿ ನಿಂತಾಗ, ನಾನು "ಹೈರಾಣ" ಆದೆ. ಕಾರಣ: ಟೀ ಪಾಯಿಂಟ್ಗಳಲ್ಲಿ ಜನರು 5 ರೂಪಾಯಿಯ ಚಹಾ ಜೊತೆಗೆ 15 ರಿಂದ 20 ರೂಪಾಯಿಯ ಕಾರವುಳ್ಳ ಮಿಚರ್ಿ ರುಚಿಕಟ್ಟಾದ ಬಜ್ಜಿ ಸವಿಯುತ್ತಿದ್ದರು. ಕಾರದ ಚಟ್ನಿ ಜೊತೆ ಮೆಣಸಿನಕಾಯಿ ಬಜ್ಜಿಯನ್ನು ಅವರು ಒಂದೊಂದಾಗಿ ಸವಿಯುತ್ತಿದ್ದರೆ, ನಾನು ನಿಂತಲ್ಲೇ ಬೆವರಿದೆ. ಆದರೆ, ಅದು ಬಿಸಿಲಿನಂದಲ್ಲ. ಅವರು ಕಾರದ ಮೆಣಸಿನಕಾಯಿ ಜೊತೆ ಬೆಳೆಸಿಕೊಂಡ ನಂಟನ್ನು ಕಂಡು!

ಇಷ್ಟೆಲ್ಲ ಕಂಡು, ಸುಮ್ಮನಿರುವುದಾದರೂ ಹೇಗೆ? ನೇರವಾಗಿ ಹೋಗಿ ಒಬ್ಬರನ್ನು ಕೇಳಿಯೇ ಬಿಟ್ಟೆ. ಸುಡುಸುಡುವ ಬಿಸಿಲಿನಲ್ಲಿ ನೀವು ಬಿಸಿ ಬಿಸಿ ಚಹಾ ಕುಡಿಯುವುದಾದರೂ ಹೇಗೆ? ಅವರು ನೀಡಿದ್ದು ಸರಳ ಉತ್ತರ: ಬಿಸಿಲಿನಲ್ಲಿ ಬಿಸಿ ಚಹಾ ದೇಹವನ್ನು ಇನ್ನಷ್ಟು ಬಿಸಿಯಾಗಿಸದೇ ನಿಯಂತ್ರಿಸುತ್ತದೆ. ಅತಿಯಾದ ಬಿಸಿಲಿನಲ್ಲಿ ಅತಿಯಾದ ತಣ್ಣನೆಯ ಪದಾರ್ಥ ಸೇವಿಸಿದರೆ ಅಥವಾ ಕುಡಿದರೆ, ಶೀತ ಅಥವಾ ಬೇರೆ ಸಮಸ್ಯೆ ಕಾಡುತ್ತದೆ. ಆದರೆ ಬಿಸಿ ಚಹಾ ಸೇವಿಸಿದರೆ, ಅಂತಹ ಸಮಸ್ಯೆಯಾಗುವುದಿಲ್ಲ.

ಈ ಪ್ರದೇಶದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಿರಲು ಹಲವು ವೈಜ್ಞಾನಿಕ ಕಾರಣಗಳಿವೆ. ಅವುಗಳನ್ನು ಒಟ್ಟುಗೂಡಿಸಿ, ಬಿಸಿಲಿನ ಸಮಗ್ರ ಚಿತ್ರಣ ಪಡೆಯಬೇಕು. ಮಂಗಳೂರು ಮತ್ತು ಕಲಬುಗರ್ಿ ಬಿಸಿಲಿಗೂ ಹಲವು ರೀತಿಯ ವ್ಯತ್ಯಾಸವಿದ್ದರೆ, ಕಲಬುಗರ್ಿ ಮತ್ತು ಬೆಂಗಳೂರಿನ ಬಿಸಿಲಿಗೂ ಅಷ್ಟೇ ಪ್ರಮಾಣದ ಅಂತರವಿದೆ. ಬೇರೆ ಬೇರೆ ಜಿಲ್ಲೆಗಳ ಕೆಲ ಜನರು ಬಿಸಿಲಿನ ಜೊತೆ ಹೆಚ್ಚು ಸಾಂಗತ್ಯ ಬೆಳೆಸಿಕೊಳ್ಳಲು ಬಯಸುವುದಿಲ್ಲ. ಆದರೆ ಕಲಬುಗರ್ಿ ಜನರು ಬಿಸಿಲಿನಲ್ಲಿ "ಬೆಚ್ಚನೆಯ" ಅನುಭೂತಿ ಪಡೆಯುತ್ತಾರೆ.

ಬಿಸಿಲಿನ ಕುರಿತು ಇಷ್ಟೆಲ್ಲ ಬರೆಯಲು ಮತ್ತೊಂದು ಕಾರಣವಾಗಿದ್ದು, ಕಡ್ಲೆಕಾಯಿಗಿಡ (ಸುಲಗಾಯಿ) ಮತ್ತು ಅವುಗಳ ಮಾರಾಟಗಾರರು. ಬೇರೆಯಲ್ಲೂ ಸಹ ಸಿಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಡ್ಲೆಕಾಯಿ ಗಿಡ ಕಲಬುಗರ್ಿಗೆ ಬಂದಿವೆ. ಇಲ್ಲಿನ ಯಾವುದೇ ಪ್ರಮುಖ ಬೀದಿ, ಸ್ಥಳ ಅಥವಾ ವೃತ್ತಗಳಿಗೆ ಹೋದರೆ ಸಾಕು, ಅಲ್ಲಿ ನಿಶ್ಚಿತವಾಗಿ ಮಹಿಳೆಯೊಬ್ಬರು ಬಿಸಿಲಲ್ಲಿ ಕಡ್ಲೆಕಾಯಿಗಿಡ ಮಾರುತ್ತಿರುವುದು ಕಾಣಸಿಗುತ್ತಾರೆ. ಬಿಸಿಲು ಎಷ್ಟೇ ಏರಿಕೆಯಾದರೂ ಅಥವಾ ಸಂಜೆ ವೇಳೆ ಚಳಿ ಕೊಂಚ ಜಾಸ್ತಿಯಾದರೂ ವ್ಯಾಪಾರಸ್ಥರು ಒಂದೇ ಬದಿ ಕೂತು ಮಾರುತ್ತಾರೆ. ಬೆಳಿಗ್ಗೆ 10ಕ್ಕೆ ಬಂದವರು ರಾತ್ರಿ 8ರ ನಂತರವೇ ಅಲ್ಲಿಂದ ನಿರ್ಗಮಿಸುತ್ತಾರೆ.

ಹುಬ್ಬಳ್ಳಿಯಲ್ಲಿ ದುರ್ಗದಬೈಲಿಗೆ ಹೋದಾಗ ಅಥವಾ ಜನತಾ ಬಜಾರ್ ಬಳಿ ಸುತ್ತಾಡಿದಾಗ ಮಾತ್ರ ಅಲ್ಲಲ್ಲಿ ಕಡ್ಲೆಕಾಯಿ ಗಿಡ ಮಾರಾಟಗಾರರು ಸಿಗುತ್ತಿದ್ದರು. ಅವುಗಳನ್ನು ಖರೀದಿಸಿ, ಮನೆಯವರೆಗೆ ಕಡ್ಲೆಕಾಯಿ ತಿಂದುಕೊಂಡು ಹೋಗುವುದೇ ಒಂದು ಖುಷಿ. ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ವಾಸವಿದ್ದಾಗ, ಅದು ಸಿಕ್ಕಿದ್ದು ತುಂಬಾನೇ ಕಡಿಮೆ. ಆದರೆ ಕಲಬುಗರ್ಿಯಲ್ಲಿ ವಾರದಿಂದ ಕಣ್ಣು ಹಾಯಿಸಿದ ಕಡೆಯಲೆಲ್ಲ, ಕಡ್ಲೆಕಾಯಿಗಳದ್ದೇ ಭರಾಟೆ. ಒಂದರ್ಥದಲ್ಲಿ ಕಡ್ಲೆಕಾಯಿಗಳ ಪರಿಷೆ!

ಕೆಲ ಮಕ್ಕಳು ಕೊಂಚ ದೊಡ್ಡವರಾದ ಬಳಿಕ ರಸ್ತೆಯುದ್ದಕ್ಕೂ ಮನಸ್ಸಿಗೆ ಬಂದುದ್ದೆಲ್ಲ ತಿನ್ನುತ್ತ ಅಥವಾ ಐಸ್ಕ್ರೀಮ್ ಸವಿಯುತ್ತ ಹೋಗಲು ಇಚ್ಛಿಸುವುದಿಲ್ಲ. ಆದರೆ ಕಡ್ಲೆಕಾಯಿಗಿಡ ಹಿರಿಯರನ್ನೂ ಸಹ ಮಕ್ಕಳನ್ನಾಗಿಸುತ್ತದೆ. 10 ರೂಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದಷ್ಟು ಕಡ್ಲೆಕಾಯಿಗಿಡ ಖರೀದಿಸಿ, ನಡೆಯುತ್ತ ಸಾಗಿದರೆ, ಅಂತಹ ಮುಜುಗರ ಆಗುವುದಿಲ್ಲ. ಒಬ್ಬರು ಹಾಗೆ ನಡೆಯುತ್ತಿರುವುದು ಕಂಡು ಮತ್ತೊಬ್ಬರೂ ಸಹ ಖರೀದಿಸಿ, ಅದನ್ನು ಸವಿಯುತ್ತ ಮುಂದೆ ಸಾಗುತ್ತಾರೆ.

ಕಲಬುಗರ್ಿಯಲ್ಲಿ ಸದ್ಯಕ್ಕೆ ಜನರಿಗೆ ಬಿಸಿಲು, ಬಿಸಿ ಚಹಾ, ಮಿಚರ್ಿ ಬಜ್ಜಿ ಜೊತೆ ಕಡ್ಲೆಕಾಯಿಗಿಡ "ಪಸಂದ್"
ಆಗುತ್ತಿದೆ!
-ರಾಹುಲ ಬೆಳಗಲಿ



Friday, December 9, 2016

ಗುಲಬರ್ಗಾದ 'never sleeping' ತಾಣ!

ಗುಲಬರ್ಗಾದ 'never sleeping' ತಾಣ!
ಹೆಚ್ಚೇನೂ ಬೇಡ. ಸಂಜೆ ಅಥವಾ ರಾತ್ರಿ ವೇಳೆ ಬರೀ 30 ನಿಮಿಷ. ಅಲ್ಲಿರುವ ಕಟ್ಟೆ ಮೇಲೆ ಕೂರಿ. ಇಲ್ಲದಿದ್ದರೆ, ಅದರ ಬದಿ ನಿಲ್ಲಿ. ಅಪರಿಚಿತರಾಗಿ ಇರಿ. ಯಾರನ್ನೂ ಮಾತನಾಡಿಸಬೇಡಿ. ಪರಿಚಯಿಸಿಕೊಳ್ಳುವ ಗೋಜಿಗೂ ಹೋಗಬೇಡಿ. ತಲೆಯಲ್ಲಿ ಎಂತಹದ್ದು ಯೋಚನೆ ಇಟ್ಟುಕೊಳ್ಳಬೇಡಿ. ಜೇಬು ಅಥವಾ ಪರ್ಸಲ್ಲಿರುವ ಮೊಬೈಲ್ ಫೋನ್ ಹೊರತೆಗೆಯಬೇಡಿ. ಮೌನವಾಗಿ ಗಮನಿಸಿ. ನಿಮಗೆ ಗೊತ್ತಿಲ್ಲದಂತೆ ಸೂಕ್ಷ್ಮತೆಯಿಂದ ಕೂಡಿರುವ ಬದುಕಿನ ಇನ್ನೊಂದು ಮುಖಕ್ಕೆ ಸಾಕ್ಷಿಯಾಗುತ್ತೀರಿ. ಹಾಗಂತ ಎಲ್ಲಿ ಬೇಕೆಂದಲ್ಲಿ ನಿಲ್ಲಬೇಡಿ. ನಿಮ್ಮ ದೊಡ್ಡೂರಿನ ರೈಲು ನಿಲ್ದಾಣದ ಸೂಕ್ತ ಸ್ಥಳ. ಇಲ್ಲಿ ಗುಲಬರ್ಗಾದ ರೈಲು ನಿಲ್ದಾಣದ ಕತೆ ಹೇಳ್ತೀನಿ. ಬಹುತೇಕ ಮಂದಿಗೆ ಅದು ಬರೀ ರೈಲು ನಿಲ್ದಾಣ. ಆದರೆ ನನ್ನ ಪಾಲಿಗೆ ಅದು 'never sleeping'' (ಎಂದೂ ಮಲಗದ) ತಾಣ.
ಸೂರ್ಯ ಮುಳುಗಿ, ಇನ್ನೇನೂ ಕತ್ತಲು ಆವರಿಸತೊಡಗುತ್ತದೆ. ಬೀದಿ ಬೀದಿ ತಿರುಗಿ ಬಿಸಿಲಲ್ಲಿ ಬೆಂದ ಭಿಕ್ಷುಕ ನಿಲ್ದಾಣದ ಮೂಲೆಯೊಂದರಲ್ಲಿ ಸೇರಿಕೊಳ್ಳುತ್ತಾನೆ. ಹರಿದ ಬಟ್ಟೆ ತೊಟ್ಟ ಪುಟ್ಟ ಮಕ್ಕಳೊಂದಿಗೆ ಬರುವ ಅನಾರೋಗ್ಯಪೀಡಿತ ತಾಯಿ ಜೋಳಿಗೆಯಿಂದ ಕಟಕಟಿ ರೊಟ್ಟಿ, ತಂಗಳನ್ನ ಹೊರತೆಗೆಯುತ್ತಾಳೆ. ಕೂದಲು ಕೆದರಿಕೊಂಡ ಮಾನಸಿಕ ಅಸ್ವಸ್ಥನೊಬ್ಬ ಚರಂಡಿ ಬದಿ ಕೂತು ಎಲ್ಲರನ್ನೂ ಬಯ್ಯತೊಡಗುತ್ತಾನೆ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ದುಡಿದ ಹಣದಿಂದ ಬಾಲಕ ರಸ್ತೆ ಬದಿ ಆಲೂ ಬಾತ್ ತಿಂದು ತಂಪಾದ ನೆಲದ ಮೇಲೆ ನಿದ್ದೆಗೆ ಜಾರಲು ಪ್ರಯತ್ನಿಸುತ್ತಾನೆ. ಸ್ನಾನ ಮಾಡದೇ ಮತ್ತು ಮುಖ ತೊಳೆಯದೇ ವರ್ಷಗಳಿಂದ ಒಂದೇ ಕಡೆ ಸ್ಥಳದಲ್ಲಿ ಉಳಿದಿರುವ ಅಂಗವಿಕಲ ಹಿರಿಯಜ್ಜನೊಬ್ಬ ಇವರೆಲ್ಲ ಹಾಜರಾತಿ ಖಾತ್ರಿಪಡಿಸಿಕೊಳ್ಳುತ್ತಾನೆ. ವಿಶೇಷವೆಂದರೆ, ನಿಲ್ದಾಣದ ಆವರಣದಲ್ಲಿದ್ದರೂ ಇವರು ಯಾರೂ ಸಹ ಪರಸ್ಪರ ಮಾತನಾಡಿಸುವುದಿಲ್ಲ. ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಇರುತ್ತಾರೆ. ಅವರದ್ದೇ ಆದ ಪ್ರಪಂಚದಲ್ಲಿ!
ಈವರೆಗೆ ಹೇಳಿದ್ದು ಅನಿಶ್ಚಿತತೆ ಮೇಲೆ ಬದುಕುತ್ತಿರುವವರ ಬಗ್ಗೆ. ಇಲ್ಲಿ ಇನ್ನಷ್ಟು ಜನರು ಬರುತ್ತಾರೆ. ಪುಟ್ಟದಾದ ಗಂಟುಮೂಟೆ ಅಥವಾ ಬ್ಯಾಗು ತಲೆ ಕೆಳಗೆ ಹಾಕಿಕೊಂಡು ಮಲಗಿಬಿಡುತ್ತಾರೆ. ಇನ್ನೂ ಕೆಲವರು ಹೊದಿಕೆ ಮತ್ತು ಹರಿದ ದಿಂಬನ್ನು ಹೊತ್ತು ತಂದು ಅಲ್ಲಿ ನಿದ್ರಿಸುತ್ತಾರೆ. ಹಣವಿರದ ಕಾರಣ ಟಿಕೆಟ್ ಖರೀದಿಸಲಾಗದೇ ದಿಕ್ಕು ತೋಚದೇ ಮೈಮುದುಡಿಕೊಂಡು ಮಲಗಿದವರು ಸಿಗುತ್ತಾರೆ. ಈಗೇಕೆ ಅವಸರ, ನಾಳೆ ಹೋದರಾಯಿತು ಎಂದು ಕೆಲ ಪ್ರಯಾಣಿಕರು ಕುಟುಂಬ ಸಮೇತ ಅಲ್ಲಿಯೇ ನಿದ್ದೆ ಮಾಡಿಬಿಡುತ್ತಾರೆ. ತರಗಟ್ಟುವ ಚಳಿಯಿದ್ದರೂ, ತಣ್ಣನೆಯ ನೆಲವಿದ್ದರೂ ಬೆಚ್ಚನೆಯ ನಿದ್ದೆಗೆ ಹಪಹಪಿಸುತ್ತಾರೆ. ಇವರೆಲ್ಲರ ಮಧ್ಯೆ ಇನ್ನೂ ಕೆಲವರು ಸೇರಿರುತ್ತಾರೆ. ಅವರು ಇಲ್ಲಿ ನಿದ್ದೆ ಮಾಡುತ್ತಿರುವುದಕ್ಕೆ ಇನ್ನಷ್ಟು ಕಾರಣಗಳಿರುತ್ತವೆ. ಇವರೆಲ್ಲರೂ ನಿದ್ದೆ ಮಾಡಲೆಂದೇ ಕೆಲವರು ಎಚ್ಚರ ಇರುತ್ತಾರೆ. ಅವರು ನಿದ್ದೆ ಮಾಡಿದ ಕೂಡಲೇ ಅವರ ಬಳಿಯಿರುವುದನ್ನ ತೆಗೆದುಕೊಂಡು ಓಡಿ ಬಿಡಬೇಕೆಂದು ಹೊಂಚು ಹಾಕಿರುತ್ತಾರೆ. ಅವರು ಯಾರು, ಎಲ್ಲಿ ಓಡಿ ಹೋಗುತ್ತಾರೆ ಮತ್ತು ಅವರನ್ನು ಹೇಗೆ ಹಿಡಿಯಬೇಕು ಎಂದು ಅರಿತಿರುವ ಪೊಲೀಸರು ಸಹ ಅಲ್ಲೇ ಕಾವಲಿಗೆ ಇರುತ್ತಾರೆ!
ನಿಲ್ದಾಣದ ಕಾಯಂ ಅತಿಥಿಗಳು ಸೇರಿದಂತೆ ಎಲ್ಲರೂ ನಿದ್ದೆ ಮಾಡಿದ ಕೂಡಲೇ ಎಲ್ಲವೂ ಸ್ತಬ್ಧವಾಯಿತು ಅಂತ ಅನ್ನಿಸಬಹುದು. ಆದರೆ, ಅದು ಹಾಗೆ ಆಗುವುದಿಲ್ಲ. ನಿಜವಾದ ಚಟುವಟಿಕೆ ಆರಂಭವಾಗುವುದೇ ಆಗ. ಇಲ್ಲಿ ರಾತ್ರಿ ಎಂಬುದು ನಿದ್ರಾರಹಿತ ಚಟುವಟಿಕೆ. ಆವರಣದಲ್ಲಿ ಎಲ್ಲರೂ ಒಂದೊಂದು ದಿಕ್ಕಿನಲ್ಲಿ ಮಲಗುತ್ತಾರೆ. ಟಿಕೆಟ್ ಕೌಂಟರ್, ಹೊರಾಂಗಣ, ಮೊಬೈಲ್ ಚಾರ್ಜರ್ ಬಳಿ, ಪ್ರವೇಶದ್ವಾರದ ಹತ್ತಿರ ಎಲ್ಲಿ ಬೇಕೆಂದಲ್ಲಿ ಸಿಗುತ್ತಾರೆ. ನಡೆದಾಡಲು ಜಾಗ ಇರುವುದಿಲ್ಲ. ಅವರು ಕಾಲಿನಡಿ ಸಿಕ್ಕಿಬಿಡುತ್ತಾರೆ. ಅದಕ್ಕಾಗಿ ಓಡಾಡುವವರು ಎಚ್ಚರಿಕೆಯಿಂದ ನಡೆಯಬೇಕು.
ಇಲ್ಲಿ ರಾತ್ರಿ ಪೂರ್ತಿ ರೈಲುಗಳ ಆಗಮನ-ನಿರ್ಗಮನ ಆಗುವ ಕಾರಣ ಅಪಾರ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಲೇ ಇರುತ್ತಾರೆ. ಯಾರು ನಿದ್ದೆ ಮಾಡಲಿ-ಬಿಡಲಿ ಜನರ ದಂಡು ಬರುತ್ತಲೇ ಇರುತ್ತದೆ. ಇಲ್ಲಿನ ಕ್ಯಾಂಟೀನ್, ಹೋಟೆಲ್ ಅಥವಾ ತಿಂಡಿತಿನಿಸು ಮಳಿಗೆ ಯಾವಾಗಲೂ ತೆರೆದಿರುತ್ತದೆ. ಮಧ್ಯರಾತ್ರಿ 1 ಅಥವಾ 2 ಗಂಟೆಯಾದರೂ ಬೆಳಗಿನ 8ರ ಚಹಾ ಕುಡಿದಷ್ಟೇ ಖುಷಿಯಾಗುತ್ತದೆ. ಜೊತೆಗೆ ತಿಂಡಿ, ಮಸಾಲೆ ದೋಸೆ, ಆಲೂಬಾತ್ ಮುಂತಾದವು ಇದ್ದೇ ಇರುತ್ತದೆ. ಅವುಗಳೊಂದಿಗೆ ಚಹಾ ಸೇವಿಸುವ ಕ್ಷಣ ಮನಸ್ಸಿಗೆ ಮುದ ನೀಡುತ್ತದೆ. ರಾತ್ರಿ ಪೂರ್ತಿ ಚಟುವಟಿಕೆಯೇ ಹೀಗೆ ನಡೆಯುತ್ತದೆ.
ಇವೆಲ್ಲದರ ಮಧ್ಯೆ ಬಿಸ್ಕತ್, ಚಹಾ, ಕಾಫಿ, ವಡಾ ಪಾಂವ್, ಇಡ್ಲಿವಡಾ, ಭೇಲ್ಪೂರಿ ಮುಂತಾದವು ಮಾರುವವರೂ ಇರುತ್ತಾರೆ. ಅವರೊಂದಿಗೆ ಮಾತನಾಡಿಸಿದರೆ, ಬದುಕಿನ ಇನ್ನೊಂದು ಮಗ್ಗಲು ಬೆಳಕಿಗೆ ಬರುತ್ತದೆ. ಒಬ್ಬೊಬ್ಬರದ್ದು ಒಂದೊಂದು ಕತೆ, ಒಂದೊಂದು ಅನುಭವದ ಪಾಠ ಹೇಳುತ್ತವೆ.
ರೈಲು ನಿಲ್ದಾಣ ಎಂಬುದು ಬರೀ ಪ್ರಯಾಣಿಕರು ಬಂದು-ಹೋಗುವ ಸ್ಥಳವಲ್ಲ. ಅದು ಬದುಕಿನ ಹಲವು ಮುಖಗಳನ್ನು ಪರಿಚಯಿಸುವ ಜಾಗವೂ ಹೌದು. ಈ ತಾಣವು ಕೆಲವರಿಗೆ ನಿರಂತರ ಆಶ್ರಯವಾದರೆ, ಇನ್ನೂ ಕೆಲವರ ಬಾಳಿನ ತಿರುವಿಗೂ ಕಾರಣವಾಗುತ್ತದೆ. ಈ ಬರಹದಲ್ಲಿ ದಾಖಲಾಗಿರುವ ವ್ಯಕ್ತಿಗಳು ಅಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುವ ಜನರೂ ಇರುತ್ತಾರೆ. ಅಸಹಾಯಕ ಸ್ಥಿತಿಯಲ್ಲಿ ಇರುವವರನ್ನು ಸಹಾಯ ಮಾಡುವ ಹಿರಿಯರು ಮತ್ತು ಕಾಳಜಿಯುಳ್ಳವರು ಇರುತ್ತಾರೆ. ಬೇರೆ ಬೇರೆ ಕಾರಣಗಳಿಂದ ಬಹುತೇಕ ಮಂದಿ ನಿಲ್ದಾಣದಲ್ಲಿ ಪದೇ ಪದೇ ಕಾನೂನು ಉಲ್ಲಂಘಿಸುತ್ತಾರೆ. ನಿಯಮಗಳನ್ನು ಪಾಲಿಸುವುದಿಲ್ಲ. ತಪ್ಪುಗಳನ್ನು ಮುಂದುವರೆಸುತ್ತಾರೆ. ಆದರೂ ಸಹ ಇವೆಲ್ಲವನ್ನೂ ಕಂಡು ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಸಹಿಸಿಕೊಳ್ಳುತ್ತಾರೆ. ಕೆಲವರಿಗೆ ಮುಲಾಜಿಲ್ಲದೇ ದಂಡ ವಿಧಿಸುತ್ತಾರೆ. ಇನ್ನೂ ಕೆಲವರಿಗೆ ಮಾನವೀಯತೆ ತಳಹದಿ ಮೇಲೆ ಕರುಣೆ ತೋರುತ್ತಾರೆ.
ಕೆಲವರು ನಿಲ್ದಾಣದ ಆವರಣದಲ್ಲೇ ಅಡುಗೆ ಸಿದ್ದಪಡಿಸಿಕೊಳ್ಳುತ್ತಾರೆ. ಕೆಲವರು ಬುತ್ತಿ ತಂದಿದ್ದನ್ನು ಅಲ್ಲಿಯೇ ಬಿಚ್ಚುಕೊಂಡು ತಿನ್ನುತ್ತಾರೆ. ಕೆಲ ಬಾರಿ ಬಡವರಿಗೆ ಮತ್ತು ಹಸಿದವರಿಗೂ ನೀಡುತ್ತಾರೆ. ಆಗ ನಿಲ್ದಾಣವು ದಾಸೋಹದ ಸ್ವರೂಪ ಪಡೆಯುತ್ತದೆ.
ರಾತ್ರಿ ಕಳೆಯುತ್ತಿದ್ದಂತೆಯೇ, ಮತ್ತೊಂದು ರಾತ್ರಿ ಬರುತ್ತದೆ. ಎಲ್ಲರೂ ನಿದ್ದೆ ಮಾಡಿದ ನಂತರವೂ "ನೆವರ್ ಸ್ಲೀಪಿಂಗ್" ತಾಣದಲ್ಲಿ ಚಟುವಟಿಕೆ ಮುಂದುವರೆಯುತ್ತದೆ.
-ರಾಹುಲ ಬೆಳಗಲಿ



Tuesday, December 6, 2016

ಕಲಬುರ್ಗಿ ಗಿಜಿಗಿಡುವ ಸಂತೆಯಲ್ಲೊಬ್ಬ ಶ್ರಮಿಕ ಸಂತ....






ಕಲಬುರ್ಗಿ ಗಿಜಿಗಿಡುವ ಸಂತೆಯಲ್ಲೊಬ್ಬ ಶ್ರಮಿಕ ಸಂತ.......

ಸಂಜೆ 7ರ ಸಮಯ. ಕಲಬುಗರ್ಿಯ ತಿಮ್ಮಾಪುರೆ ವೃತ್ತ. ಇನ್ನೇನೂ ರಸ್ತೆ ದಾಟಬೇಕು. ಮುಂದಕ್ಕೆ ಇಟ್ಟ ಹೆಜ್ಜೆ ತಕ್ಷಣವೇ ಹಿಂದಿಟ್ಟೆ. ಬಲಗೈ ತನ್ನಿಂದಾತಾನೇ ಜೇಬಿನಲ್ಲಿದ್ದ ಸ್ಮಾರ್ಟ್ ಫೋನ್ನತ್ತ ಹೋಯ್ತು. ತಡ ಮಾಡದೇ 10 ರಿಂದ 15 ಕ್ಲಿಕ್ಸ್ ತೆಗೆದುಕೊಂಡೆ. ಯಾರು ಏನಾದರೂ ಅಂದ್ಕೊಳ್ಳಲಿ ಅಥವಾ ತಡೆಯಲಿ, ಅವರಿಗೆ ಆಮೇಲೆ ಉತ್ತರಿಸಿದರೆ ಆಯ್ತು. ಮತ್ತೊಂದು 5 ನಿಮಿಷ ಅಲ್ಲಿಯೇ ನಿಂತೆ. ಮತ್ತೆ ಚಿತ್ರಗಳನ್ನು ತೆಗೆದುಕೊಂಡೆ. ಮೊದಲಿಗಿಂತ ಈಗಿನ ಚಿತ್ರಗಳು ಚೆನ್ನಾಗಿ ಬಂದವು. ಸಮಾಧಾನವಾಯ್ತು. 

ಹಾಗಂತ ಅದು ಸುಂದರ ಹುಡುಗಿ ಅಥವಾ ಸೆಲೆಬ್ರಿಟಿ ಚಿತ್ರವಲ್ಲ. ಎಟಿಎಂ ಬಳಿ ಸಾಲಾಗಿ ನಿಂತ ಜನರದ್ದು ಅಲ್ಲ. ಸದಾ ಗಿಜಿಗಿಡುವ ಅಥವಾ ಕೇಕೆ ಹಾಕುವ ಗುಂಪಿನದ್ದೂ ಅಲ್ಲ. ರಸ್ತೆಬದಿ ನಿಂತು ಯಾವುದೇ ಮುಜುಗರವಿಲ್ಲದೇ ಒಂದೇ ಸಮನೆ ಚಿತ್ರಗಳನ್ನು ಕ್ಲಿಕ್ಕಿಸುವಂತೆ ಮಾಡಿದ್ದು: ಒಬ್ಬ ಸಾಮಾನ್ಯ ಸೈಕಲ್ ರಿಕ್ಷಾ ತಾತಾ. ಕಲಬುಗರ್ಿಯ ಸಂತೆಯಲ್ಲಿ ಪುಟ್ಟ ನೆಮ್ಮದಿಗಾಗಿ ಕಾತರಿಸುತ್ತಿರುವ ಸಂತನಂತೆ ಕಂಡು ಬಂದರು. ಸಾಕಷ್ಟು ಸದ್ದುಗದ್ದಲ, ಜನದಟ್ಟಣೆ, ಕಿರಿಕಿರಿ ಮಧ್ಯೆಯೂ ಅವರು ಕಣ್ಮುಚ್ಚಿ ನಿದ್ದೆಯ ಧ್ಯನದಲ್ಲಿದ್ದಂತೆ ಗೋಚರಿಸಿದರು.

ದಿನದ 24 ಗಂಟೆಯಲ್ಲಿ ಒಂದು ಗಂಟೆಯಷ್ಟು ನೆಮ್ಮದಿಯಿಂದ ನಿದ್ದೆಯಾಗಲ್ಲ ಎಂದು ಕೆಲವರು ಪೇಚಾಡುವುದು ನೋಡಿದ್ದೇನೆ. ನಿದ್ರಾಹೀನತೆ ಅಪಾಯಕಾರಿ ಎಂಬುದು ವೈದ್ಯರು ಹೇಳಿದ್ದು ಕೇಳಿದ್ದೇನೆ. ಉಳ್ಳವರು ಎಷ್ಟೋ ಸಲ ನಿದ್ರೆಯ ಮಾತ್ರೆ ಸೇವಿಸಿ, ಕೃತಕವಾಗಿಯಾದರೂ ನಿದ್ರೆ ಬಂದರೆ ಸಾಕೆಂದು ಬಯಸುತ್ತಾರೆ. ಕೆಲವರಿಗೆ ಬೇರೆ ಬೇರೆ ಕಾರಣಳಿಂದ ನಿದ್ದೆಯೇ ಬರುವುದಿಲ್ಲ. ರಾಜಕಾರಣಿಗಳು ಕಾರ್ಯಕ್ರಮದಲ್ಲಿ ನಿದ್ದೆ ಮಾಡುವುದನ್ನು ಕೆಲವರು ವ್ಯಂಗ್ಯವಾಡುತ್ತಾರೆ. ಆದರೆ ಅವೆಲ್ಲವೂ ಅಸ್ಪಷ್ಟ ನಿದ್ದೆಯೇ ಹೊರತು ನೆಮ್ಮದಿಯಿಂದ ಕೂಡಿರುವಂತದ್ದಲ್ಲ.

ಆದರೆ ದುಡಿಮೆಗಾಗಿ ದೇಹವನ್ನು ದಂಡಿಸಿ, ಯಾತನೆ ಅನುಭವಿಸಿ, ಬೆವರನ್ನು ಸುರಿಸಿ ನಿದ್ದೆ ಮಾಡುವವರನ್ನು ಕಂಡಾಗ ಒಂದರ್ಥದಲ್ಲಿ ಖುಷಿಯಾಗುತ್ತದೆ. ಅವರಿಗೆ ಹಾಸಿಗೆ, ದಿಂಬು, ಎಸಿ, ಫ್ಯಾನು ಮತ್ತು ಶಾಂತಚಿತ್ತ ವಾತಾವರಣ ಇದ್ಯಾವುದೂ ಬೇಡ. ಯಾರೂ ಕಿರಿಕಿರಿ ಮಾಡದಿದ್ದರೆ ಅಷ್ಟೇ ಸಾಕು, ಅತ್ಯಂತ ಇಕ್ಕಟ್ಟಾದ ಮತ್ತು ಸದ್ದುಗದ್ದಲದಿಂದ ಕೂಡಿದ ಸ್ಥಳದಲ್ಲೇ ನಿದ್ದೆಗೆ ಜಾರುತ್ತಾರೆ. ಕಲಬುಗರ್ಿಯ ಸೈಕಲ್ ರಿಕ್ಷಾ ತಾತಾ ಅಂತಹ ಶ್ರಮಿಕರಲ್ಲಿ ಒಬ್ಬರು. ದೇಹವನ್ನು ದಂಡಿಸಿದ್ದ ಅವರ ಮೈ ವಿಶ್ರಾಂತಿ, ಕಣ್ಣಿನ ರಪ್ಪೆ ನಿದ್ದೆಗೆ ಹಾತೊರೆಯುತ್ತಿದ್ದವು.

ಶಾಲಾ ಶಿಕ್ಷಣವೂ ಪೂರ್ಣಗೊಳಿಸದೇ ಅನಕ್ಷರಸ್ಥರಾಗಿಯೇ ಉಳಿದು ಬಿಡುವ ಈ ರೀತಿಯ ಶ್ರಮಿಕ ವರ್ಗದವರಿಗೆ ಅಚ್ಟುಕಟ್ಟಾದ ಮನೆ ಇರುವುದಿಲ್ಲ. ಒಂದು ವೇಳೆ ಮನೆಯಿದ್ದರೂ ಅದು ಪುಟ್ಟ ಕೋಣೆ. ಆದರೆ ಅದೇ ದೊಡ್ಡ ಬಂಗಲೆ ಎಂಬಂತೆ ಅದರಲ್ಲೇ 8 ರಿಂದ 10 ಮಂದಿ ಬದುಕಿಬಿಡ್ತಾರೆ. ಅಲ್ಲಿ ಸರದಿಯಂತೆ ನಿದ್ದೆ ಮಾಡುತ್ತಾರೆ. ಹಗಲೆಲ್ಲಾ ದುಡಿದವರು ನಿದ್ದೆ ಮಾಡಿದರೆ, ರಾತ್ರಿ ದುಡಿದವರು ಇಡೀ ಹಗಲು ನಿದ್ದೆಗೆ ಮೀಸಲಿಡುತ್ತಾರೆ. ಇನ್ನೂ ಕೆಲವರು ನಿದ್ದೆಯ ಗೋಜಿಗೆ ಹೋಗದೇ, ದುಡಿದು ಕುಟುಂಬ ಸಾಕಿದರೆ ಸಾಕು ಎಂಬ ಚಿಂತೆಯಲ್ಲಿ ಇರುತ್ತಾರೆ. ಕಲಬುಗರ್ಿಯಷ್ಟೇ ಅಲ್ಲ, ಯಾವುದೇ ಊರಿನಲ್ಲಿದ್ದರೂ ಅಂತಹವರು ಸಿಗುತ್ತಾರೆ.

ಅಂತಹ ಶ್ರಮಿಕ ವರ್ಗದವರ ನೂರಾರು ಮನೆಗಳನ್ನು ಬೆಂಗಳೂರಿನ ಕೋರಮಂಗಲ ಸಮೀಪದ ಈಜೀಪುರದಲ್ಲಿ ಕಂಡಿದ್ದೆ. ಯಾವುದೇ ಸಮಯ ಕುಸಿದು ಬೀಳುವಂತಹ ಕಟ್ಟಡದಲ್ಲಿ ಸಾವಿರಾರು ಮಂದಿ ವಾಸವಿದ್ದರು. ಒಂದೊಂದು ಮನೆ ಪುಟ್ಟ ಕೋಣೆಯಂತೆ, ಜೋಪಡಿಪಟ್ಟಿಯಂತೆ ಇತ್ತು. ಆದರೆ ಅದರಲ್ಲೇ ಮೂರು-ನಾಲ್ಕು ಕುಟುಂಬಗಳು ವಾಸವಿದ್ದವು. ತಂದೆ-ತಾಯಿ, ಅಣ್ಣ ತಂಗಿ, ಮಗ-ಸೊಸೆ, ಮಗಳು-ಅಳಿಯಾ ಹೀಗೆ. ಆ ಕಟ್ಟಡಗಳಿಂದ ಜನರನ್ನು ಹೊರಹಾಕಲು ಆಗಿನ ಸಕರ್ಾರ ಹರಸಾಹಸಪಟ್ಟಿತು. ಬಿಬಿಎಂಪಿ, ಪೊಲೀಸರಿಗೂ ಸಾಕುಸಾಕಾಯಿತು.

ಈಜೀಪುರದ್ದು ಸರಿಸುಮಾರು 8 ವರ್ಷದ ಹಿಂದಿನ ಮಾತು. ಕಟ್ಟಡ ಕುಸಿತದಿಂದ ಒಬ್ಬರು ಅಥವಾ ಇಬ್ಬರು ಮೃತಪಟ್ಟಾಗ, ಅದರ ಕುರಿತು ಪ್ರಜಾವಾಣಿಯಲ್ಲಿ ನಿರಂತರ ಫಾಲೋ-ಅಪ್ ಮಾಡಿದ್ದೆವು. ಆಗ ಬರೆದ "ಇಕ್ಕಟ್ಟಾದ ಮನೆಗಳಲ್ಲಿ ಪುಟ್ಟ ಸಂಸಾರ" ವಿಶೇಷ ವರದಿಯು ನನಗೆ ಪ್ರಶಸ್ತಿಯೂ ತಂದು ಕೊಟ್ಟಿತು. ಹಳೆಯ ಕಟ್ಟಡ ಕೆಡವಿ ಹೊಸ ಮನೆಗಳನ್ನು ಅಪಾರ್ಟಮೆಂಟ್ ಮಾದರಿಯಲ್ಲಿ ಕಟ್ಟಿಸಿಕೊಡುವುದಾಗಿ ಅಲ್ಲಿನ ನಿವಾಸಿಗಳಿಗೆ ಮಾತು ನೀಡಲಾಗಿತ್ತು. ಮಾತು ಈಡೇರಿತೇ, ಜನರಿಗೆ ಸೂರು ಸಿಕ್ಕಿತೇ ಎಂಬುದು ಗೊತ್ತಿಲ್ಲ. ಆ ಸ್ಥಳಕ್ಕೆ ಮತ್ತೆ ಭೇಟಿ ನೀಡಲು ಆಗಲಿಲ್ಲ. 

ನೋಡಿ, ಏನೋ ಹೇಳಲು ಹೋಗಿ ಇನ್ನೇನೋ ಬರೀತಾ ಇದ್ದೀನಿ. ಹಾಂ....ನಿದ್ದೆಯ ವಿಷಯ ಮಾತನಾಡುತ್ತಿದ್ದೆ. ನಿದ್ದೆ ಮಾಡುತ್ತಿದ್ದ ತಾತಾಗೆ ಎಬ್ಬಿಸಿ ಒಂದು ಕ್ಷಣ ಮಾತನಾಡಿಬಿಡೋಣ ಅಂತ ಅನ್ನಿಸ್ತು. ಎರಡು ಬಾರಿ ಸೈಕಲ್ ರಿಕ್ಷಾ ಬಳಿ ಹೋದೆ. ಆದರೆ ಯಾಕೋ ಮನಸ್ಸು ತಡೆಯಿತು. ಬೆಂಕಿಯಲ್ಲಿ ಬೆಂದು ನಿದ್ದೆಯಲ್ಲಿ ವಿರಮಿಸುತ್ತಿರುವವರನ್ನು ಅಡ್ಡಿಪಡಿಸುವುದು ಸರಿಯಲ್ಲ ಅಂತ ಅನ್ನಿಸಿತು. ಹೇಗಿದ್ದರೂ ಅವರು ಕಲಬುಗರ್ಿಯಲ್ಲೇ ಇರುತ್ತಾರೆ. ಮುಂದೆ ಯಾವುದಾದರೂ ಸಂದರ್ಭದಲ್ಲಿ ಭೇಟಿಯಾಗಬಹುದು. ಆಗ ಪರಿಚಯ ಮಾಡಿಕೊಳ್ಳಬಹುದೆಂದು ಸುಮ್ಮನಾದೆ.

ಸೈಕಲ್ ರಿಕ್ಷಾ ತಾತಾ ನಿದ್ರಾವಸ್ಥೆಯಲ್ಲೇ ನನ್ನ ಹಳೆಯ ನೆನಪುವೊಂದನ್ನು ಸಹ ಕೆಣಕಿದರು. ಕೆಲ ವರ್ಷಗಳ ಹಿಂದೆ ಕೋಲ್ಕತ್ತಾಗೆ ಭೇಟಿ ನೀಡಿದ್ದೆ. ಅಲ್ಲಿ ಕಾಳಿ ಘಾಟ್ ಅಥವಾ ಕಾಳಿ ಮಂದಿರ ಎಂಬ ಸ್ಥಳವಿದೆ. ಅಲ್ಲಿ ಹೋಗಬೇಕೆಂದರೆ ಮಾನವ ಚಾಲಿತ ಸೈಕಲ್ ರಿಕ್ಷಾಗಳಿವೆ. ಅಷ್ಟೇ ಅಲ್ಲ, ಮನುಷ್ಯರೇ ಕುದುರೆಗಳಂತೆ ನಡೆದು, ಓಡಿಕೊಂಡು ರಿಕ್ಷಾ ಚಲಾಯಿಸುತ್ತಾರೆ. ಮೊದಲೆಲ್ಲ, ಅವು ತುಂಬಾ ಇದ್ದವು. ಈಗೇನೋ ಕಡಿಮೆಯಾಗಿವೆಯಂತೆ. ಅದರ ಬಗ್ಗೆಯೂ ಅಸ್ಪಷ್ಟ ಮಾಹಿತಿಯಿದೆ. ಕಾರಣ, ಕಾಳಿ ಘಾಟ್ನತ್ತ ಮತ್ತೆ ಹೋಗಲು ಆಗಲಿಲ್ಲ.

ಇಷ್ಟೆಲ್ಲ ಬರೆಯಬೇಕೆಂದು ಅಂದ್ಕೊಂಡಿರಲಿಲ್ಲ. ಆದರೆ "ಕಲಬುಗರ್ಿಯ ಸಂತೆಯ ಆ ಶ್ರಮಿಕ ಸಂತ"ನಿಂದ ಇಷ್ಟೆಲ್ಲ ಬರೆಯಬೇಕಾಯಿತು.




Wednesday, February 16, 2011

ಒಲವು ಸಂಭ್ರಮಿಸುವ ಸಮಯ.....




ನಾನು ನಿನ್ನ ಕಣ್ಣೀರಾದರೆ,
ಕಣ್ಣಂಚಿನಿಂದ ಇಳಿದು
ತುಟಿಯಂಚಿನಲ್ಲಿ ಸಾಯುವೆ,
ನೀನು ನನ್ನ ಕಣ್ಣೀರಾದರೆ,
ನಾನು ಅಳವುದೇ ಇಲ್ಲ,
ನಿನ್ನ ಕಳೆದುಕೊಳ್ಳುವ ಭಯದಿಂದ....

ಒಲವಿನ ಆಪ್ತ ಸಂಗಾತಿ ಎದುರ‍್ದಿದಾಗ, ಮಾತು ಕಿರಿಕಿರಿ ಅನ್ನಿಸುತ್ತದೆ. ಮೌನ ಆವರಿಸುವ ಹೊತ್ತಿಗೆ ಕಂಗಳು ಸಂವಹನ ನಡೆಸುತ್ತವೆ. ಎಲವೂ ಪರಸ್ಪರ ನೋಟದ್ಲಲೇ ವ್ಯಕ್ತವಾದಾಗ, ಜಾರಿ ಹೋಗುತ್ತಿರುವ ಕ್ಷಣಗಳನ್ನು ನ್ಲಿಲಿಸಲು ಮನಸ್ಸು ಹಾತೊರೆಯುತ್ತದೆ. ‘ಈ ಜಗತ್ತಿನ್ಲಲಿ ಇರೋದೇ ಎರಡು ಜೀವಿಗಳು. ನಾನು ಮತ್ತು ನೀನು. ಇಲಿ ಬೇರೆಯವರಿಗೆ ಪ್ರವೇಶ ನಿಷಿದ್ಧ. ಇದು ಅಲಿಖಿತ ನಿಯಮ’ ಎಂಬ ಪುಟ್ಟ ಒಪ್ಪಂದ. ಇಂತಹ ಒಪ್ಪಂದಗಳು ಅಸ್ತಿತ್ವಕ್ಕೆ ಬರುವ ದಿನ: ಫೆಬ್ರುವರಿ ೧೪-ಪ್ರೇಮಿಗಳ ದಿನ.
ಹೌದು! ಬಹುತೇಕ ಪ್ರೇಮಿಗಳನ್ನು ಒಂದುಗೂಡಿಸುವುದೇ ಮತ್ತು ಪರಸ್ಪರ ವಿಶ್ವಾಸ ಮೂಡಿಸುವುದೇ ಈ ರೀತಿಯ ಒಪ್ಪಂದ. ‘ನನಗೆ ನೀನು, ನಿನಗೆ ನಾನು’ ಎಂದು ಹೇಳಿಕೊಂಡು ಭಾಂಧವ್ಯದ ಕೊಂಡಿಯೊಂದು ಬೆಸೆದುಕೊಳ್ಳಲು ಪ್ರೇಮಿಗಳು ಆಯ್ಕೆ ಮಾಡಿಕೊಳ್ಳುವ ದಿನ ಫೆಬ್ರುವರಿ ೧೪. ಸಂತ ವ್ಯಾಲೆಂಟೈನ್ ಹೆಸರಿನ್ಲಲಿ ಆಚರಿಸಲಾಗುವ ಈ ದಿನವನ್ನು ಪ್ರತಿಯೊಬ್ಬ ಪ್ರೇಮಿಯೂ ಸಂಭ್ರಮಿಸದೇ ಇರುವುದಿಲ್ಲ.

೨೪ ಗಂಟೆಗಳೇನೂ,
ಇಡೀ ಜೀವನವನ್ನೇ ಸಮರ್ಪಿಸುವೆ,
ನಿನ್ನ ಆ ಮುಗುಳ್ನಗುವಿನ
ಒಂದು ಕ್ಷಣಕ್ಕಾಗಿ.....

‘ನೀನು ನನ್ನ ಜೊತೆಯ್ದಿದರೆ ಸಾಕು, ಇಡೀ ಜಗತ್ತನ್ನೇ ಎದುರಿಸುತ್ತೇನೆ’ ಎಂದು ಹೇಳಿಕೊಳ್ಳಲು ಅವಕಾಶ ಕೊಡುವ ಈ ದಿನವನ್ನು ಒಬ್ಬೊಬ್ಬರು ಒಂದೊಂದು ರೀತಿಯ್ಲಲಿ ಆಚರಿಸುತ್ತಾರೆ. ಕೆಲವರು ಒಲವಿನ ಸಂಗಾತಿಯ ಜೊತೆ ಇಡೀ ದಿನ ಕಳೆದುಬಿಟ್ಟರೆ, ಇನ್ನೂ ಕೆಲವರು ಶುಭಾಶಯ ಪತ್ರ-ಹೂಗಳನ್ನು ಕೊಟ್ಟು ಪ್ರೀತಿ ಹಂಚಿಕೊಳ್ಳುತ್ತಾರೆ. ಕೆಲಸದ ಜಂಜಾಟ ಮತ್ತು ಪೋಷಕರ ಭಯವ್ದಿದರೆ, ಮೊಬೈಲ್ ಫೋನ್‌ನ್ಲಲಿ ಪುಟ್ಟ ಪುಟ್ಟ ಎಸ್‌ಎಂಎಸ್‌ಗಳನ್ನು ಕಳುಹಿಸುವ ಮೂಲಕ ಪರಸ್ಪರ ಒಲವಿನ ದಿನದ ಶುಭಾಶಯ ಹೇಳಿಕೊಳ್ಳುತ್ತಾರೆ.
ಕಾಲೇಜುಗಳ್ಲಲಿ ಹುಡುಗಿಯರು ಹೆಚ್ಚಿನ ಸಂಖ್ಯೆಯ್ಲಲಿ ಕಾಣದ್ದಿದರೂ ಹುಡುಗರ ದಂಡು ಮಾತ್ರ ಭಾರಿ ಸಂಖ್ಯೆಯ್ಲಲಿರುತ್ತದೆ. ಒಬ್ಬನ ಕೈಯ್ಲಲ್ದಿದರೆ ಕೆಂಗುಲಾಬಿಯ್ದಿದರೆ, ಇನ್ನೂಬ್ಬ ಕೈಯ್ಲಲಿ ಪುಟ್ಟದಾದ ಚೀಟಿ. ಇಂಥವರ ನಡುವೆ ಕೆಲ ಜಾಣರೂ ಇರುತ್ತಾರೆ. ಕೆಂಗುಲಾಬಿ ನೀಡಿದ ನಂತರವೂ ಪ್ರೀತಿ ಸಿಗದ್ದಿದರೇನು, ಸ್ನೇಹವಾದರೂ ಸಿಗಲಿ ಎಂದು ಮರೆಯ್ಲಲಿ ಹಳದಿ ಗುಲಾಬಿ ಹಿಡಿದಿರುತ್ತಾರೆ.


ಬಯಸಿದ್ದೆಲ್ಲವೂ ಸಿಕ್ಕಿತು ನನಗೆ
ನೆಮ್ಮದಿ, ಶಾಂತಿ ಮತ್ತು ಸ್ಫೂರ್ತಿ,
ಇದಕ್ಕೆ ಕಾರಣ ಹುಡುಕಲೆತ್ನಿಸಿದಾಗ,
ಕಂಡಿದ್ದು ನೀನು ಮತ್ತು ನಿನ್ನ ಒಲವು....

ಆದರೆ ಪ್ರೀತಿ ಎಂಬುದು ಹುಡುಗಾಟಿಕೆ-ತುಂಟಾಟ ಅಷ್ಟೇ ಅಲ. ವ್ಯಕ್ತಿಯೊಬ್ಬನನ್ನು ನಂಬಿ ಇಡೀ ಜೀವನವನ್ನೇ ಸಮರ್ಪಿಸುವಂತೆ ಮಾಡುವ ಅಗಾಧ ಶಕ್ತಿ ಪ್ರೀತಿ. ಸಣ್ಣಪುಟ್ಟ ಮುನಿಸು-ವಿರಸದ ನಡುವೆಯೂ ದಿಢಿ ರ್‌ನೇ ನಗು ತರಿಸಬ್ಲಲ ಸಂಕೇತ ಪ್ರೀತಿ. ಕಾಲೇಜು ವಿದ್ಯಾರ್ಥಿಗಳ್ಲಲಿನ ಪ್ರೀತಿ-ಪ್ರೇಮ ಕೆಲ ವರ್ಷಗಳ ನಂತರ ಅಚ್ಚರಿ ಮೂಡಿಸದೇ ಇರುವುದ್ಲಿಲ. ಬಹುತೇಕ ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರೀತಿಯನ್ನು ಕಳೆದುಕೊಳ್ಳುವುದು ಅಥವಾ ಪಡೆದುಕೊಳ್ಳವುದೇ ಕಾಲೇಜಿನ ದಿನಗಳಲ್ಲಿ.
ಅದೇ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡು ದೊಡ್ಡ ವ್ಯಕ್ತಿಯಾಗಿ ಕಾಲೇಜು ದಿನಗಳನ್ನು ನೆನಪಿಸಿಕೊಂಡರೆ ತಮ್ಮ ಪ್ರೀತಿ-ಪ್ರೇಮದ ಕ್ಷಣಗಳನ್ನು ಕಂಡು ಮನದಲ್ಲೇ ನಗುತ್ತಾರೆ. ಹುಚ್ಚು ಮತ್ತು ಅತಿರೇಕದ ಪ್ರೇಮದ ಕ್ಷಣಗಳನ್ನು ಪದೇ ಪದೇ ಕೆದಕುತ್ತಾರೆ.

ಆತಂಕವಿದ್ದರೂ ಪುಟ್ಟ ಧೈರ್ಯ
ಸೋಲಿನಲ್ಲೂ ಚಿಕ್ಕ ಗೆಲುವು
ಅವಮಾನದಲ್ಲೂ ಕಿರಿದಾದ ಆತ್ಮವಿಶ್ವಾಸ
ಈ ಎಲವನ್ನೂ ಕಲಿಸಿದ ನಿನ್ನ ಮರೆಯುವುದು ಸಾಧ್ಯವೇ?...

ಒಬ್ಬ ವ್ಯಕ್ತಿಯಿಂದ ಭೌತಿಕವಾಗಿ ಏನೂ ಸಿಗದ್ದಿದರೂ ಚಿಂತೆಯ್ಲಿಲ. ‘ಜೊತೆಯಿರುತ್ತೇನೆ, ಪ್ರತಿ ಕ್ಷಣವೂ ಮತ್ತು ಪ್ರತಿ ಹೆಜ್ಜೆಯ್ಲಲೂ’ ಎಂಬ ಮಾತು ವ್ಯಕ್ತಿಯ ಬಲ ತುಂಬುವುದ್ಲಲದೇ ಮಾನಸಿಕ ಸ್ಥೈರ್ಯ ನೀಡಲು ಸಹ ಕಾರಣವಾಗುತ್ತದೆ. ಇಡೀ ಜಗತ್ತು ತನ್ನ ಮೇಲೆ ನಂಬಿಕೆ ಕಳೆದುಕೊಂಡರೂ ಮತ್ತು ಪದೇ ಪದೇ ಅವಮಾನ ಮಾಡಿದರೂ ಬೇಸರವ್ಲಿಲ. ‘ಪ್ರೀತಿಸಿದ ಸಂಗಾತಿ ನನ್ನ ಮೇಲೆ ವಿಶ್ವಾಸ ಕಳೆದುಕೊಂಡ್ಲಿಲ, ಅವಮಾನದ ನೆಪವನ್ನೊಡ್ಡಿ ದೂರವಾಗ್ಲಿಲ’ ಎಂಬ ಭಾವನೆ ಮನಸ್ಸಿನ್ಲಲಿ ಮೂಡಿದರೆ ಸಾಕು. ಹೋದ ಜೀವ ಮತ್ತೆ ಬಂದಂತೆ, ಕಳೆದು ಹೋಗಿದ್ದ ಆತ್ಮವಿಶ್ವಾಸ ಮತ್ತೆ ಸಿಕ್ಕಂತೆ.

ನನ್ನ ಪ್ರೀತಿ, ಪ್ರೇಮ, ಒಲುಮೆ ನಿನಗೆ
ಒಂದರ್ಥದಲ್ಲಿ ಎಲ್‌ಐಸಿ ಬಾಂಡ್ ಇದ್ದಂತೆ,,
ಇರುತ್ತದೆ ಪ್ರತಿಕ್ಷಣ,
ಜೀವನದ ಜೊತೆಗೂ, ಜೀವನದ ನಂತರವೂ....

ಈ ಒಂದು ಮಾತಿಗಾಗಿ ಎದುರು ನೋಡುವ ಸಂಗಾತಿಗೆ ಜೀವನದ ನಂತರವೂ ನಂಟು ಉಳಿಸಿಕೊಳ್ಳುವ ಹಂಬಲ. ಪುನರ್‌ಜನ್ಮ ಎಂಬುದರ‍್ಲಲಿ ನಂಬಿಕೆ ಇಲದ್ದಿದರೂ ಮತ್ತು ಅದು ಅಸಹಜ ಎಂಬ ಅಳುಕು ಪದೇ ಪದೇ ಕಾಡುತ್ತ್ದಿದರೂ ಮನಸ್ಸು ‘ನಮ್ಮ ಪ್ರೇಮ ಅತೀತ ಮತ್ತು ಅಮರ’ ಎಂದು ಪಿಸುಗುಡುತ್ತಿರುತ್ತದೆ.

Sunday, January 23, 2011

ಪ್ರಕರ ಸೂರ್ಯ ಮುಳುಗಿದ ನಂತರ... ಆಕಾಶದಲ್ಲಿ ಬಣ್ಣದ ಚಿತ್ತಾರ


ದಿನಪೂರ್ತಿ ಪ್ರಕರವಾಗಿ ಉರಿದರೂ ಸ್ವಲ್ಪವೂ ಬಳಲಿಕೆಯನ್ನು ತೋರ್ಪಡಿಸದೇ ನಿಧಾನವಾಗಿ ಅತ್ತ ಸೂರ್ಯ ಕಣ್ಮರೆಯಾಗುತ್ತಿದ್ದರೆ, ಇತ್ತ ಅದಕ್ಕಾಗಿ ಕಾತರವಾಗಿದ್ದವು ಎಂಬಂತೆ ಬಾನಂಗಳದ ಬಣ್ಣಗಳು ಜೀವ ತಳೆಯುತ್ತಿದ್ದವು. ಆಹಾರ ಹುಡುಕುತ್ತ ದೂರದೂರಕ್ಕೆ ಹೋಗಿದ್ದ ಚಿಲಿಪಿಲಿ ಹಕ್ಕಿಗಳು ಗೂಡಿಗೆ ಮರಳುತ್ತಿದ್ದರೆ, ಅರಳಿದ್ದ ಹೂಗಳು ಕಣ್ಣಿನ ರಪ್ಪೆ ಮುಚ್ಚಿಕೊಳ್ಳುವಂತೆ ಪಕಳೆಯನ್ನು ಸೆಳೆದುಕೊಳ್ಳುತ್ತಿದ್ದವು. ಇಡೀ ದಿನದ ಜಂಜಾಟ, ಓಡಾಟ ಎಲ್ಲವನ್ನೂ ಆ ಕ್ಷಣಕ್ಕೆ ಮರೆತು ಹಿರಿಯರು ಮನೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಕಿರಿಯರು ಇಷ್ಟು ಸಮಯ ಸಿಕ್ಕಿದ್ದೇ ಸಂಭ್ರಮ ಎಂಬಂತೆ ಆಟ-ತುಂಟಾಟದಲ್ಲಿ ನಿರತರಾಗಿದ್ದರು. ಭಾನುವಾರದ ಸಂಜೆ ಎಂದಿನಂತಿರಲಿಲ್ಲ. ಆಕಾಶದತ್ತ ನೋಡಿದರೆ, ಕೆಲ ನಿಮಿಷಗಳಿಗಾದರೂ ಇಡೀ ದಿನದ ದುಗುಡ, ಆತಂಕ ಎಲ್ಲವನ್ನೂ ಕೆಲ ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ, ನೆಮ್ಮದಿ-ನಿರಾಳಭಾವದಿಂದ ಇರಲು ಮನಸ್ಸು ಬಯಸುತಿತ್ತು.
ಭೂಮಿಯಲ್ಲಿನ ಎಲ ಚಲನವಲನಗಳನ್ನು ಮರೆತು ಆಕಾಶವನ್ನು ಅಪ್ಪಿಕೊಳ್ಳುವ ಹಾಗೆ ನೋಡುತ್ತ್ತ ನಿಂತರೆ, ಪರಿಣಿತ ಕಲಾವಿದನೊಬ್ಬ ಇಡೀ ಆಕಾಶವನ್ನೇ ಕ್ಯಾನ್ವಸ್ ಮಾಡಿಕೊಂಡು ಚಿತ್ತಾರ ಮೂಡಿಸಿದ್ದಾನೆ ಎಂಬ ಅರ್ಥ ವ್ಯಕ್ತವಾಗುವತಿತ್ತು. ಸಾಲು ಸಾಲು ಮರಗಳ ನಡುನಡುವೆ ಇಣುಕುವ ನೀಲಿ ಮಿಶ್ರಿತ ಚೆಂದದ ಕೆಂಪು ಬಣ್ಣ್ಣ, ಗಾಳಿ ಬೀಸಿದಾಗಲ್ಲೆಲ ಮಿಸುಕಾಡುತ್ತಿದ್ದ ಎಲೆಗಳು ಒಂದೊಂದೇ ಭಾವವನ್ನು ಸಂಕೋಚದಿಂದಲೇ ತಿಳಿಪಡಿಸುತ್ತಿದ್ದವು. ಪ್ರಕರ ಸೂರ್ಯ ಕೆಲ ಹೊತ್ತು ದೂರವಾದರೇನು ಸೌಂದರ್ಯ ಕಳೆಗುಂದುವುದಿಲ್ಲ ಎಂದು ಆಕಾಶ ತನ್ನ ಬಣ್ಣಗಳ ಮೂಲಕ ಸಾದರಪಡಿಸಿದರೆ, ಕತ್ತಲು ಆವರಿಸಿದರೂ ಜೀವಸಂಕುಲದ ಸಂಚಲನ ನ್ಲಿಲುವುದ್ಲಿಲ ಎಂದು ಎಲೆಗಳು ಮಿಸುಕಾಟದ್ಲಲೇ ತಿಳಿಸುತ್ತ್ದಿದವು. ಈ ಎಲದಕ್ಕೂ ಸಾಕ್ಷಿ ಎಂಬಂತೆ ಕತ್ತಲು ಆವರಿಸುತ್ತಿದ್ದಂತೆ ಕೀಟಗಳು ಕಿರ್ರನೆ ಶಬ್ದ ಮಾಡತೊಡಗಿದವು.
ಮುಂಜಾವಿನ ಮಂಜು ಮತ್ತು ರಾತ್ರಿಯ ಚಳಿಯನ್ನು ಆವರಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯು ಭಾನುವಾರ ಸಂಜೆಯ ಸವಿಯನ್ನು ಸಹ ಅನುಭವಿಸಿತು. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತ್ಲಾಲೂಕುಗಳ ಗಡಿಭಾಗದ್ಲಲಿ ನಿಂತು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದಾಗ, ದೂರದ್ಲಲಿ ಎಲೋ ಆಕಾಶ-ಭೂಮಿ ಮಿಳಿತವಾದಂತೆ ಅದಕ್ಕೆ ಬಗೆಬಗೆಯ ಬಣ್ಣಗಳು ಕಾರಣವಾದಂತೆ ಕಂಡು ಬರುತ್ತಿದ್ದವು. ಕೆಲ ಹೊತ್ತು ದಿಟ್ಟಿಸಿ ನೋಡಿದರೆ, ಬಣ್ಣಗಳು ಪರಸ್ಪರ ಮಾತನಾಡಿಕೊಂಡು ಭೂಮಿಯ ಮೇಲೆ ನೀರಿನಂತೆ ಹರಿಯಲು ಯೋಜನೆ ರೂಪಿಸುತ್ತಿವೆ ಎಂಬಂತೆ ಸಣ್ಣ ಅನುಮಾನ ವ್ಯಕ್ತವಾಗುತಿತ್ತು. ಒಂದು ವೇಳೆ ಹಾಗೆ ನೀರು ಹರಿದು ಬಂದಲ್ಲಿ, ಅದನ್ನು ಪುಟ್ಟದಾದ ಡಬ್ಬಿಯಲ್ಲಿ ಹಿಡಿದಿಟ್ಟುಕೊಳ್ಳಲು ತುಂಟ ಮನಸ್ಸು ಸಂಚು ನಡೆಸಿತ್ತು.
ಕವಿ ಮನಸ್ಸಿನವರು, ಜನಸಾಮಾನ್ಯರು ಹೀಗೆ ರೋಮಾಂಚನದಿಂದ ಬೇರೆ ಬೇರೆ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದರೆ ವಿಜ್ಞಾನಿಗಳು. ಭೂಗೋಳ ಅರಿತುಕೊಂಡವರು ಬೇರೆಯದ್ದೇ ವಾದ ಮಂಡಿಸುತ್ತಿದ್ದರು. ಸೂರ್ಯ ಮುಳುಗುವ ಹೊತ್ತು ಹೀಗೆ ಚೆಂದ ಕಾಣಲು ಹಲವು ಕಾರಣಗಳಿವೆ. ಕವನದ ಸಾಲುಗಳಲ್ಲಿ ಅಲ್ಲ, ವೈಜ್ಞಾನಿಕ ಅಂಶಗಳಿಂದಲೇ ತಿಳಿದುಕೊಳ್ಳಬೇಕು ಎಂಬುದು ಅವರು ಅನಿಸಿಕೆ. ಅದಕ್ಕಾಗಿ ವೈಜ್ಞಾನಿಕ ಕಾರಣಗಳನ್ನು ಆಗು-ಹೋಗುಗಳನ್ನು ಸಹ ಅವರು ಬಿಡಿಸಿಟ್ಟರು.
’ಬೆಳಕು ತನ್ನ ಹಾದಿಯಲ್ಲಿಯ ನಿಲಂಬಿತ ಸೂಕ್ಷ್ಮಕಣಗಳೊಂದಿಗೆ ವರ್ತಿಸಿ ದಿಕ್ಕು ಬದಲಾಯಿಸಿಕೊಳ್ಳುವುದಕ್ಕೆ ಬೆಳಕಿನ ಚೆದರಿಕೆ ಎಂಬ ಹೆಸರು. ಆಕಾಶದ ನೀಲಿ ಬಣ್ಣವು ನಿಲಂಬಿತ ಧೂಳುಕಣಗಳಿಂದ ಉಂಟಾಗುವ ಬೆಳಕಿನ ಚೆದರಿಕೆಯಿಂದಲೇ ಆಗಿರುವುದು’ ಎಂದು ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ.
’ಮುಳುಗುವ ಸಮಯದಲ್ಲಿ ದಿಗಂತಕೆ ಸೂರ್ಯ ಸಮೀಪವಿರುತ್ತಾನೆ. ಆಗ ಬೆಳಕಿನ ಕಿರಣಗಳು ಭೂಮಿಯ ವಾತಾವರಣದಲ್ಲಿ ಹೆಚ್ಚು ದೂರ ಹಾಯಬೇಕಾಗುತ್ತದೆ. ಆದ್ದರಿಂದ ಹೆಚ್ಚು ಸಂಖ್ಯೆಯ ಧೂಳು ಕಣಗಳು ಅಣುಗಳು ಚೆದರಿಕೆಯನ್ನು ಉಂಟುಮಾಡುತ್ತವೆ. ನೀಲಿ ಮತ್ತು ನೇರಳೆ ಬೆಳಕು ಸೂರ್ಯನನ್ನು ನಾವು ನೋಡುವ ದಿಕ್ಕಿಗೆ ಲಂಬವಾಗಿ ಚದುರಿಹೋಗುತ್ತವೆ. ಕಡಿಮೆ ಆವರ್ತಾಂಕದ ಕೆಂಪು ಬೆಳಕು ಹೆಚ್ಚು ಚದರದೆ ನೇರವಾಗಿ ಬರುತ್ತದೆ. ಇದರಿಂದಲೇ ಸೂರ್ಯ ಕಿತ್ತಳೆ ಕೆಂಪಾಗಿ ಕಾಣಿಸುವುದು’ ಎಂದು ಅವರು ಹೇಳಿದರು.
ಸೂರ್ಯ ಮೂಡುವಾಗ ಇರುವುದಕ್ಕಿಂತ ಮುಳುಗುವಾಗ ಈ ಬಣ್ಣಗಳ ಬೆಡಗು ಹೆಚ್ಚು. ಏಕೆಂದರೆ ಹಗಲಿನಲ್ಲಿ ಮಾನವ ಸೇರಿದಂತೆ ಎಲ್ಲ ಜೀವಿಗಳ ಚಟುವಟಿಕೆಯಿಂದಾಗಿ ಸೂರ್ಯ ಮುಳುಗುವ ಹೊತ್ತಿಗೆ ವಾತಾವರಣದಲ್ಲಿ ಧೂಳು ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಭೂಮಟ್ಟದ ಮೋಡವೆನ್ನಬಹುದಾದ ಮಂಜು ಆವರಿಸಿರುತ್ತದೆ. ಭೂಮಿಯ ಉಷ್ಣತೆಯನ್ನು ರಕ್ಷಿಸುವ ಮೋಡದ ಮುಸುಕು ಇರುವುದಿಲ್ಲ. ಹಾಗಾಗಿ ಆಗಸದಲ್ಲಿ ಬಣ್ಣದ ಓಕುಳಿಗೆ ಅದ್ಭುತ ಕ್ಯಾನ್ವಸ್ ಸಿಕ್ಕಿಬಿಡುತ್ತದೆ’ ಎಂದು ಅವರು ತಿಳಿಸಿದರು.

ಹೊಸ ವರ್ಷ ಆಗಮನ.... ಸಂತಸ, ಸಂಭ್ರಮ, ನೆಮ್ಮದಿಯ ನಿರೀಕ್ಷೆ


ಕತ್ತಲ ಕಣಿವೆಯ ತುದಿಯ್ಲಲೊಂದು ಬೆಳಕ ಮೂಡಿದಂತೆ, ಬಾಯಾರಿದವನಿಗೆ ದೂರದ್ಲಲಿ ನದಿಯೊಂದು ಕಂಡಂತೆ, ಕಾನನದ್ಲಲಿ ಪ್ರಾಣಿಗಳ ಘರ್ಜನೆಯ ನಡುವೆ ಹಕ್ಕಿಗಳ ಚಿಲಿಪಿಲಿ ಕೇಳಿದಂತೆ, ಎಲವನ್ನೂ ಕಳೆದುಕೊಂಡ ನಂತರವೂ ವಿಶಿಷ್ಟವಾದ್ದದು ಸಿಕ್ಕಂತೆ, ಹಲವು ಆತಂಕ-ಅಸಮಧಾನಗಳ ನಡುವೆ ನೆಮ್ಮದಿ ಕಂಡುಕೊಂಡಂತೆ
....ನವ ವರ್ಷ ಬಂದಿದೆ. ೨೦೧೦ಕ್ಕೆ ವಿದಾಯ ಹೇಳಿ ಬಂದಿರುವ ನೂತನ ವರ್ಷ ಹಲವು ಆಶೋತ್ತರ, ಸಂಭ್ರಮ ಮತ್ತು ಸಂತೋಷವನ್ನು ಹೊತ್ತು ತಂದಿದೆ. ಸಮಸ್ಯೆ-ಸಂಕಷ್ಟಗಳು ಆಯಾ ವರ್ಷದ ಕಡೆಯ ದಿನದಂದೇ ಕೊನೆಯಾಗಲಿ ಎಂದು ಹರಿಸುತ್ತಿರುವವರಿಗೆ ಪೂರಕರವಾಗಿ ಬಂದಿರುವ ಈ ವರ್ಷ ಹಲವು ನಿರೀಕ್ಷೆಗೂ ಕಾರಣವಾಗಿದೆ.
ಈ ವರ್ಷ ಹೇಗಾದರೂ ಕಷ್ಟಪಟ್ಟು ಮನೆ ಕಟ್ಟಿಸಬೇಕು ಎಂಬ ಗುರಿ ಒಬ್ಬರಲ್ಲಿದ್ದರೆ, ಎಂಥ್ದದೇ ಅಡಚಣೆಗಳು ಎದುರಾದರೂ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಹಠ ಮತ್ತೊಬ್ಬರಲ್ಲಿ. ಬರುವ ಸಣ್ಣ ಪ್ರಮಾಣದ ಸಂಬಳದಲ್ಲಿ ತಾಯಿ-ತಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಂಬಲ ಮಗನಿಗೆ ಇದರೆ, ಒಳ್ಳೆಯ ಹುಡುಗನನ್ನು ನೋಡಿ ಮಗಳ ಮದುವೆ ಮಾಡಬೇಕು ಎಂದು ಅಪ್ಪನ ಚಿಂತೆ. ಬಸ್-ಟ್ರೇನ್‌ಗಳು ಸಾಕು, ಕಾರ್‌ನಲ್ಲಿ ಹೋಗುವ ಕನಸು ಒಬ್ಬರಿಗ್ದಿದರೆ, ದೇಶ ಸುತ್ತಿದ್ದು ಸಾಕು-ವಿದೇಶ ನೋಡಬೇಕು ಎಂಬ ಆಶಯ ಮತ್ತೊಬ್ಬರಿಗೆ. ಪರೀಕ್ಷೆಯ ಚಿಂತೆ ಮಕ್ಕಳಿಗೆ ಇದರೆ, ಘಟಿಕೋತ್ಸವದ್ಲಲಿ ಚಿನ್ನದ ಪದಕ ಗೆಲ್ಲುವ ಸಂಭ್ರಮ
ಸ್ನಾತಕೋತ್ತರ ಪದವೀಧರರಿಗೆ.
ಇದ್ಯಾವುದರ ಗೊಡವೆಯೇ ಇರದ ಬಡಜೀವಿ ಮಾತ್ರ ತನ್ನ ಪಾಡಿಗೆ ತಾನು ದುಡಿದು, ಆಯಾ ದಿನದ ದುಡಿಮೆಯಲ್ಲಿ ಊಟ ಮಾಡಿದರೆ ನೆಮ್ಮದಿ. ಬೃಹತ್ ಬಂಗಲೆಯ್ಲಲ, ಹೆಂಚಿನ ಮನೆಯ್ಲಲೂ ಕೂಡ ವಾಸವಿರದ ಬಡಪಾಯಿ ಪುಟ್ಟ ಗುಡಿಸಲಿನಲ್ಲೆ
ಜೀವನ ನಡೆಸುತ್ತಾನೆ. ಹಾಸಿಗೆ ಇದಷ್ಟು ಕಾಲು ಚಾಚಬೇಕು ಎಂಬ ಅಲಿಖಿತ ನಿಯಮ ತಿಳಿಯದಿದ್ದರೂ ಅದನ್ನು ತಿಳಿದಂತೆಯೇ ಪಾಲಿಸುವ ಆತನಿಗೆ ಪ್ರತಿದಿನವೂ ಹೊಸ ವರ್ಷವ್ದಿದಂತೆ. ಒಳ್ಳೆಯ ದುಡಿಮೆಯಾದ ದಿನದಂದು ಕುಟುಂಬ ಸದಸ್ಯರ ಜೊತೆ ಹೊಟ್ಟೆ ತುಂಬ ಊಟ ಮಾಡಿದರೆ, ಅದೇ ಹೊಸ ವರ್ಷದ ಸಂಭ್ರಮ. ಅತಿಯಾದ ಆಸೆಯೂ ಇಲ್ಲ, ನಿರಾಸೆಯೂ ಪಡಬೇಕಿಲ್ಲ.
ಹಲವು ವೈಫಲ್ಯಗಳು ಎದುರಾದರೂ ಒಂದ್ಲಿಲೊಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ ಎಂಬ ಭಾವನೆಯ್ಲಲಿ ಜೀವನ ಮಾಡುತ್ತಿರುವ ಯುವಜನರಿಗೆ ಈ ವರ್ಷ ಒಂದರ್ಥದಲ್ಲಿ ದಾರಿದೀಪ, ಅವಕಾಶಗಳ ಖಣಿಯೂ ಹೌದು. ‘ನನ್ನದು ಎಂ.ಎ ಆಗಿದೆ. ಡಿಗ್ರಿ ಪಡೆದಾಗ ತುಂಬ ಸಂತೋಷಪಟ್ಟ್ದಿದೆ. ನನ್ನ ವಿದ್ಯಾರ್ಹತೆ ಮತ್ತು ಪ್ರತಿಭೆಗೆ ಕೆಲಸ ಬೇಗನೇ ಸಿಗುತ್ತದೆ ಎಂದು ಭಾವಿಸ್ದಿದೆ. ಎಲ ಕಡೆಗೂ ಅರ್ಜಿ ಹಾಕಿದೆ. ಸಂದರ್ಶನಗಳಿಗೆ ಹಾಜರಾದೆ. ಕೇಳಿದ ಪ್ರಶ್ನೆಗಳಿಗ್ಲೆಲ ಉತ್ತರಿಸಿದೆ. ಆದರೆ ನೇಮಕಾತಿ ಪತ್ರ ನನಗೆ ಸಿಗಲ್ಲಿಲ. ಅದಕ್ಕೆ ಈಗ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತ್ದಿದೇನೆ. ಕುಟುಂಬ ನಿರ್ವಹಿಸಲಾಗದಂತಹ ವೇತನ ಸಿಗದ್ದಿದರೆ, ನಾನು ಕೆಲಸ ಮಾಡುವುದಾದರೂ ಹೇಗೆ? ಎಲರ ಮುಖದ್ಲಲೂ ಸಂತೋಷ ಕಾಣುವುದಾದರೂ ಯಾವಾಗ? ೨೦೧೦ ನಿರಾಶೆಗೊಳಿಸಿದ ಹಾಗೆ ೨೦೧೧ ಬೇಸರ ಮಾಡಿಸುವುದ್ಲಿಲ ಎಂಬ ನಂಬಿಕೆ ಇದೆ. ಈ ವರ್ಷ ಹಲವು ಕನಸುಗಳನ್ನು ನನಸು ಮಾಡುವ ಉದೇಶವಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ನಿವಾಸಿ ರಾಜಶೇಖರ್.
ನಗರದಲ್ಲಿ ವಾಸಿಸುವ ವಿದ್ಯಾವಂತ ಯುವಜನರಷ್ಟೇ ಅಲ್ಲ, ಗ್ರಾಮಗಳಲ್ಲಿರುವ ರೈತರು ಕೂಡ ಹೊಸ ವರ್ಷದ ಸಂಭ್ರಮದಲ್ಲಿದ್ದಾರೆ.ನವೆಂಬರ್ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಮನೆಗಳನ್ನು ಕಳೆದುಕೊಳ್ಳುವುದರ ಜೊತೆಗೆ ಆರ್ಥಿಕ ನಷ್ಟವನ್ನು ಅನುಭವಿಸಿದ ಬಹುತೇಕ ರೈತರು, ‘ಹೊಸ ವರ್ಷವು ಎಲರ ಬಾಳು-ಬದುಕಿನಲ್ಲೂ ಸುಖ ಸಂತೋಷದ ಸೆಲೆಯನ್ನು ಹರಿಸಲಿ’ ಎಂದು ಮನದಲ್ಲಿ ತಮಷ್ಟಕ್ಕೆ ತಾವೇ ಹರಕೆ ಹೊರುತ್ತಿದ್ದಾರೆ. ‘ಹೊಸ ವರ್ಷ ಎಲರಿಗೂ ಒಳ್ಳೆಯದು ಮಾಡಲಿ’ ಎಂದು ಪರಸ್ಪರ ಶುಭ ಹಾರೈಸಿಕೊಳ್ಳುತ್ತ ಸಂತೋಷದ್ಲಲಿರುವ ಪ್ರತಿಯೊಬ್ಬರು ಹೊಸ ಆಕಾಂಕ್ಷೆ ಮತ್ತು ನಿರೀಕ್ಷೆಗಳ ಈಡೇರಿಕೆಯನ್ನು ಎದುರು ನೋಡುತ್ತಿದ್ದಾರೆ.