Tuesday, December 6, 2016

ಕಲಬುರ್ಗಿ ಗಿಜಿಗಿಡುವ ಸಂತೆಯಲ್ಲೊಬ್ಬ ಶ್ರಮಿಕ ಸಂತ....






ಕಲಬುರ್ಗಿ ಗಿಜಿಗಿಡುವ ಸಂತೆಯಲ್ಲೊಬ್ಬ ಶ್ರಮಿಕ ಸಂತ.......

ಸಂಜೆ 7ರ ಸಮಯ. ಕಲಬುಗರ್ಿಯ ತಿಮ್ಮಾಪುರೆ ವೃತ್ತ. ಇನ್ನೇನೂ ರಸ್ತೆ ದಾಟಬೇಕು. ಮುಂದಕ್ಕೆ ಇಟ್ಟ ಹೆಜ್ಜೆ ತಕ್ಷಣವೇ ಹಿಂದಿಟ್ಟೆ. ಬಲಗೈ ತನ್ನಿಂದಾತಾನೇ ಜೇಬಿನಲ್ಲಿದ್ದ ಸ್ಮಾರ್ಟ್ ಫೋನ್ನತ್ತ ಹೋಯ್ತು. ತಡ ಮಾಡದೇ 10 ರಿಂದ 15 ಕ್ಲಿಕ್ಸ್ ತೆಗೆದುಕೊಂಡೆ. ಯಾರು ಏನಾದರೂ ಅಂದ್ಕೊಳ್ಳಲಿ ಅಥವಾ ತಡೆಯಲಿ, ಅವರಿಗೆ ಆಮೇಲೆ ಉತ್ತರಿಸಿದರೆ ಆಯ್ತು. ಮತ್ತೊಂದು 5 ನಿಮಿಷ ಅಲ್ಲಿಯೇ ನಿಂತೆ. ಮತ್ತೆ ಚಿತ್ರಗಳನ್ನು ತೆಗೆದುಕೊಂಡೆ. ಮೊದಲಿಗಿಂತ ಈಗಿನ ಚಿತ್ರಗಳು ಚೆನ್ನಾಗಿ ಬಂದವು. ಸಮಾಧಾನವಾಯ್ತು. 

ಹಾಗಂತ ಅದು ಸುಂದರ ಹುಡುಗಿ ಅಥವಾ ಸೆಲೆಬ್ರಿಟಿ ಚಿತ್ರವಲ್ಲ. ಎಟಿಎಂ ಬಳಿ ಸಾಲಾಗಿ ನಿಂತ ಜನರದ್ದು ಅಲ್ಲ. ಸದಾ ಗಿಜಿಗಿಡುವ ಅಥವಾ ಕೇಕೆ ಹಾಕುವ ಗುಂಪಿನದ್ದೂ ಅಲ್ಲ. ರಸ್ತೆಬದಿ ನಿಂತು ಯಾವುದೇ ಮುಜುಗರವಿಲ್ಲದೇ ಒಂದೇ ಸಮನೆ ಚಿತ್ರಗಳನ್ನು ಕ್ಲಿಕ್ಕಿಸುವಂತೆ ಮಾಡಿದ್ದು: ಒಬ್ಬ ಸಾಮಾನ್ಯ ಸೈಕಲ್ ರಿಕ್ಷಾ ತಾತಾ. ಕಲಬುಗರ್ಿಯ ಸಂತೆಯಲ್ಲಿ ಪುಟ್ಟ ನೆಮ್ಮದಿಗಾಗಿ ಕಾತರಿಸುತ್ತಿರುವ ಸಂತನಂತೆ ಕಂಡು ಬಂದರು. ಸಾಕಷ್ಟು ಸದ್ದುಗದ್ದಲ, ಜನದಟ್ಟಣೆ, ಕಿರಿಕಿರಿ ಮಧ್ಯೆಯೂ ಅವರು ಕಣ್ಮುಚ್ಚಿ ನಿದ್ದೆಯ ಧ್ಯನದಲ್ಲಿದ್ದಂತೆ ಗೋಚರಿಸಿದರು.

ದಿನದ 24 ಗಂಟೆಯಲ್ಲಿ ಒಂದು ಗಂಟೆಯಷ್ಟು ನೆಮ್ಮದಿಯಿಂದ ನಿದ್ದೆಯಾಗಲ್ಲ ಎಂದು ಕೆಲವರು ಪೇಚಾಡುವುದು ನೋಡಿದ್ದೇನೆ. ನಿದ್ರಾಹೀನತೆ ಅಪಾಯಕಾರಿ ಎಂಬುದು ವೈದ್ಯರು ಹೇಳಿದ್ದು ಕೇಳಿದ್ದೇನೆ. ಉಳ್ಳವರು ಎಷ್ಟೋ ಸಲ ನಿದ್ರೆಯ ಮಾತ್ರೆ ಸೇವಿಸಿ, ಕೃತಕವಾಗಿಯಾದರೂ ನಿದ್ರೆ ಬಂದರೆ ಸಾಕೆಂದು ಬಯಸುತ್ತಾರೆ. ಕೆಲವರಿಗೆ ಬೇರೆ ಬೇರೆ ಕಾರಣಳಿಂದ ನಿದ್ದೆಯೇ ಬರುವುದಿಲ್ಲ. ರಾಜಕಾರಣಿಗಳು ಕಾರ್ಯಕ್ರಮದಲ್ಲಿ ನಿದ್ದೆ ಮಾಡುವುದನ್ನು ಕೆಲವರು ವ್ಯಂಗ್ಯವಾಡುತ್ತಾರೆ. ಆದರೆ ಅವೆಲ್ಲವೂ ಅಸ್ಪಷ್ಟ ನಿದ್ದೆಯೇ ಹೊರತು ನೆಮ್ಮದಿಯಿಂದ ಕೂಡಿರುವಂತದ್ದಲ್ಲ.

ಆದರೆ ದುಡಿಮೆಗಾಗಿ ದೇಹವನ್ನು ದಂಡಿಸಿ, ಯಾತನೆ ಅನುಭವಿಸಿ, ಬೆವರನ್ನು ಸುರಿಸಿ ನಿದ್ದೆ ಮಾಡುವವರನ್ನು ಕಂಡಾಗ ಒಂದರ್ಥದಲ್ಲಿ ಖುಷಿಯಾಗುತ್ತದೆ. ಅವರಿಗೆ ಹಾಸಿಗೆ, ದಿಂಬು, ಎಸಿ, ಫ್ಯಾನು ಮತ್ತು ಶಾಂತಚಿತ್ತ ವಾತಾವರಣ ಇದ್ಯಾವುದೂ ಬೇಡ. ಯಾರೂ ಕಿರಿಕಿರಿ ಮಾಡದಿದ್ದರೆ ಅಷ್ಟೇ ಸಾಕು, ಅತ್ಯಂತ ಇಕ್ಕಟ್ಟಾದ ಮತ್ತು ಸದ್ದುಗದ್ದಲದಿಂದ ಕೂಡಿದ ಸ್ಥಳದಲ್ಲೇ ನಿದ್ದೆಗೆ ಜಾರುತ್ತಾರೆ. ಕಲಬುಗರ್ಿಯ ಸೈಕಲ್ ರಿಕ್ಷಾ ತಾತಾ ಅಂತಹ ಶ್ರಮಿಕರಲ್ಲಿ ಒಬ್ಬರು. ದೇಹವನ್ನು ದಂಡಿಸಿದ್ದ ಅವರ ಮೈ ವಿಶ್ರಾಂತಿ, ಕಣ್ಣಿನ ರಪ್ಪೆ ನಿದ್ದೆಗೆ ಹಾತೊರೆಯುತ್ತಿದ್ದವು.

ಶಾಲಾ ಶಿಕ್ಷಣವೂ ಪೂರ್ಣಗೊಳಿಸದೇ ಅನಕ್ಷರಸ್ಥರಾಗಿಯೇ ಉಳಿದು ಬಿಡುವ ಈ ರೀತಿಯ ಶ್ರಮಿಕ ವರ್ಗದವರಿಗೆ ಅಚ್ಟುಕಟ್ಟಾದ ಮನೆ ಇರುವುದಿಲ್ಲ. ಒಂದು ವೇಳೆ ಮನೆಯಿದ್ದರೂ ಅದು ಪುಟ್ಟ ಕೋಣೆ. ಆದರೆ ಅದೇ ದೊಡ್ಡ ಬಂಗಲೆ ಎಂಬಂತೆ ಅದರಲ್ಲೇ 8 ರಿಂದ 10 ಮಂದಿ ಬದುಕಿಬಿಡ್ತಾರೆ. ಅಲ್ಲಿ ಸರದಿಯಂತೆ ನಿದ್ದೆ ಮಾಡುತ್ತಾರೆ. ಹಗಲೆಲ್ಲಾ ದುಡಿದವರು ನಿದ್ದೆ ಮಾಡಿದರೆ, ರಾತ್ರಿ ದುಡಿದವರು ಇಡೀ ಹಗಲು ನಿದ್ದೆಗೆ ಮೀಸಲಿಡುತ್ತಾರೆ. ಇನ್ನೂ ಕೆಲವರು ನಿದ್ದೆಯ ಗೋಜಿಗೆ ಹೋಗದೇ, ದುಡಿದು ಕುಟುಂಬ ಸಾಕಿದರೆ ಸಾಕು ಎಂಬ ಚಿಂತೆಯಲ್ಲಿ ಇರುತ್ತಾರೆ. ಕಲಬುಗರ್ಿಯಷ್ಟೇ ಅಲ್ಲ, ಯಾವುದೇ ಊರಿನಲ್ಲಿದ್ದರೂ ಅಂತಹವರು ಸಿಗುತ್ತಾರೆ.

ಅಂತಹ ಶ್ರಮಿಕ ವರ್ಗದವರ ನೂರಾರು ಮನೆಗಳನ್ನು ಬೆಂಗಳೂರಿನ ಕೋರಮಂಗಲ ಸಮೀಪದ ಈಜೀಪುರದಲ್ಲಿ ಕಂಡಿದ್ದೆ. ಯಾವುದೇ ಸಮಯ ಕುಸಿದು ಬೀಳುವಂತಹ ಕಟ್ಟಡದಲ್ಲಿ ಸಾವಿರಾರು ಮಂದಿ ವಾಸವಿದ್ದರು. ಒಂದೊಂದು ಮನೆ ಪುಟ್ಟ ಕೋಣೆಯಂತೆ, ಜೋಪಡಿಪಟ್ಟಿಯಂತೆ ಇತ್ತು. ಆದರೆ ಅದರಲ್ಲೇ ಮೂರು-ನಾಲ್ಕು ಕುಟುಂಬಗಳು ವಾಸವಿದ್ದವು. ತಂದೆ-ತಾಯಿ, ಅಣ್ಣ ತಂಗಿ, ಮಗ-ಸೊಸೆ, ಮಗಳು-ಅಳಿಯಾ ಹೀಗೆ. ಆ ಕಟ್ಟಡಗಳಿಂದ ಜನರನ್ನು ಹೊರಹಾಕಲು ಆಗಿನ ಸಕರ್ಾರ ಹರಸಾಹಸಪಟ್ಟಿತು. ಬಿಬಿಎಂಪಿ, ಪೊಲೀಸರಿಗೂ ಸಾಕುಸಾಕಾಯಿತು.

ಈಜೀಪುರದ್ದು ಸರಿಸುಮಾರು 8 ವರ್ಷದ ಹಿಂದಿನ ಮಾತು. ಕಟ್ಟಡ ಕುಸಿತದಿಂದ ಒಬ್ಬರು ಅಥವಾ ಇಬ್ಬರು ಮೃತಪಟ್ಟಾಗ, ಅದರ ಕುರಿತು ಪ್ರಜಾವಾಣಿಯಲ್ಲಿ ನಿರಂತರ ಫಾಲೋ-ಅಪ್ ಮಾಡಿದ್ದೆವು. ಆಗ ಬರೆದ "ಇಕ್ಕಟ್ಟಾದ ಮನೆಗಳಲ್ಲಿ ಪುಟ್ಟ ಸಂಸಾರ" ವಿಶೇಷ ವರದಿಯು ನನಗೆ ಪ್ರಶಸ್ತಿಯೂ ತಂದು ಕೊಟ್ಟಿತು. ಹಳೆಯ ಕಟ್ಟಡ ಕೆಡವಿ ಹೊಸ ಮನೆಗಳನ್ನು ಅಪಾರ್ಟಮೆಂಟ್ ಮಾದರಿಯಲ್ಲಿ ಕಟ್ಟಿಸಿಕೊಡುವುದಾಗಿ ಅಲ್ಲಿನ ನಿವಾಸಿಗಳಿಗೆ ಮಾತು ನೀಡಲಾಗಿತ್ತು. ಮಾತು ಈಡೇರಿತೇ, ಜನರಿಗೆ ಸೂರು ಸಿಕ್ಕಿತೇ ಎಂಬುದು ಗೊತ್ತಿಲ್ಲ. ಆ ಸ್ಥಳಕ್ಕೆ ಮತ್ತೆ ಭೇಟಿ ನೀಡಲು ಆಗಲಿಲ್ಲ. 

ನೋಡಿ, ಏನೋ ಹೇಳಲು ಹೋಗಿ ಇನ್ನೇನೋ ಬರೀತಾ ಇದ್ದೀನಿ. ಹಾಂ....ನಿದ್ದೆಯ ವಿಷಯ ಮಾತನಾಡುತ್ತಿದ್ದೆ. ನಿದ್ದೆ ಮಾಡುತ್ತಿದ್ದ ತಾತಾಗೆ ಎಬ್ಬಿಸಿ ಒಂದು ಕ್ಷಣ ಮಾತನಾಡಿಬಿಡೋಣ ಅಂತ ಅನ್ನಿಸ್ತು. ಎರಡು ಬಾರಿ ಸೈಕಲ್ ರಿಕ್ಷಾ ಬಳಿ ಹೋದೆ. ಆದರೆ ಯಾಕೋ ಮನಸ್ಸು ತಡೆಯಿತು. ಬೆಂಕಿಯಲ್ಲಿ ಬೆಂದು ನಿದ್ದೆಯಲ್ಲಿ ವಿರಮಿಸುತ್ತಿರುವವರನ್ನು ಅಡ್ಡಿಪಡಿಸುವುದು ಸರಿಯಲ್ಲ ಅಂತ ಅನ್ನಿಸಿತು. ಹೇಗಿದ್ದರೂ ಅವರು ಕಲಬುಗರ್ಿಯಲ್ಲೇ ಇರುತ್ತಾರೆ. ಮುಂದೆ ಯಾವುದಾದರೂ ಸಂದರ್ಭದಲ್ಲಿ ಭೇಟಿಯಾಗಬಹುದು. ಆಗ ಪರಿಚಯ ಮಾಡಿಕೊಳ್ಳಬಹುದೆಂದು ಸುಮ್ಮನಾದೆ.

ಸೈಕಲ್ ರಿಕ್ಷಾ ತಾತಾ ನಿದ್ರಾವಸ್ಥೆಯಲ್ಲೇ ನನ್ನ ಹಳೆಯ ನೆನಪುವೊಂದನ್ನು ಸಹ ಕೆಣಕಿದರು. ಕೆಲ ವರ್ಷಗಳ ಹಿಂದೆ ಕೋಲ್ಕತ್ತಾಗೆ ಭೇಟಿ ನೀಡಿದ್ದೆ. ಅಲ್ಲಿ ಕಾಳಿ ಘಾಟ್ ಅಥವಾ ಕಾಳಿ ಮಂದಿರ ಎಂಬ ಸ್ಥಳವಿದೆ. ಅಲ್ಲಿ ಹೋಗಬೇಕೆಂದರೆ ಮಾನವ ಚಾಲಿತ ಸೈಕಲ್ ರಿಕ್ಷಾಗಳಿವೆ. ಅಷ್ಟೇ ಅಲ್ಲ, ಮನುಷ್ಯರೇ ಕುದುರೆಗಳಂತೆ ನಡೆದು, ಓಡಿಕೊಂಡು ರಿಕ್ಷಾ ಚಲಾಯಿಸುತ್ತಾರೆ. ಮೊದಲೆಲ್ಲ, ಅವು ತುಂಬಾ ಇದ್ದವು. ಈಗೇನೋ ಕಡಿಮೆಯಾಗಿವೆಯಂತೆ. ಅದರ ಬಗ್ಗೆಯೂ ಅಸ್ಪಷ್ಟ ಮಾಹಿತಿಯಿದೆ. ಕಾರಣ, ಕಾಳಿ ಘಾಟ್ನತ್ತ ಮತ್ತೆ ಹೋಗಲು ಆಗಲಿಲ್ಲ.

ಇಷ್ಟೆಲ್ಲ ಬರೆಯಬೇಕೆಂದು ಅಂದ್ಕೊಂಡಿರಲಿಲ್ಲ. ಆದರೆ "ಕಲಬುಗರ್ಿಯ ಸಂತೆಯ ಆ ಶ್ರಮಿಕ ಸಂತ"ನಿಂದ ಇಷ್ಟೆಲ್ಲ ಬರೆಯಬೇಕಾಯಿತು.




No comments:

Post a Comment